ತೀಯಾರನ್ನು ಪ್ರತ್ಯೇಕ ಸಮುದಾಯವಾಗಿ ಗುರುತಿಸಬೇಕು-ಸದಾಶಿವ ಉಳ್ಳಾಲ್

ಕಾಸರಗೋಡು: ಉತ್ತರ ಕೇರಳದಲ್ಲಿ ಪ್ರಮುಖ ಹಾಗೂ ಪ್ರಬಲವಾಗಿರುವ ತೀಯಾ ಸಮುದಾಯ ಈಳವನ್ ಉಪಜಾತಿಯಲ್ಲದ ಕಾರಣ   ತೀಯರನ್ನು ಪ್ರತ್ಯೇಕ ಸಮುದಾಯವೆಂದು ಸರಕಾರಿ ದಾಖಲೆಗಳಲ್ಲಿ ದಾಖಲಿಸಲು  ಕೇಂದ್ರ, ರಾಜ್ಯ ಸರಕಾರಗಳು ಸಿದ್ಧವಾಗಬೇಕೆಂದು ಮಂಗಳೂರು ಭಾರತೀಯ ತೀಯಾ ಸಮಾಜದ ಅಧ್ಯಕ್ಷ ಸದಾಶಿವ ಉಳ್ಳಾಲ ಆಗ್ರಹಿಸಿದರು. ಅವರು ಕಾಸರಗೋಡು ಪುರಭವನದಲ್ಲಿ ನಡೆದ ತೀಯಾ ಮಹಾಸಭಾ ಜಿಲ್ಲಾ ಸಮಿತಿಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.  ಪಾಲಕುನ್ನು ಕಳಗ ಶ್ರೀ ಭಗವತೀ ದೇವಸ್ಥಾನದ ಸ್ಥಾನಿಕ ಕಪ್ಪಣಕ್ಕಾಲ್ ಕುಂಞಿಕಣ್ಣನ್ ಆಯತ್ತಾರ್, ತಳಂಗರೆ ಪಿಲಿಕುಂಜೆ ಶ್ರೀ ಭಗವತೀ ದೇವಸ್ಥಾನದ ಸ್ಥಾನಿಕ ನಾಗೇಶ್ ಕಾರ್ನವರ್, ಚೌಕಿ ಏರಿಯಾಕೋಟಾ ಶ್ರೀ ಭಗವತೀ ದೇವಸ್ಥಾನದ  ಸ್ಥಾನಿಕ ಚಂದ್ರಶೇಖರ ಕಾರ್ನವರ್ ದೀಪ ಬೆಳಗಿಸಿ ಸಭೆಗೆ ಚಾಲನೆ ನೀಡಿದರು. ತೀಯಾ ಮಹಾಸಭಾ ಜಿಲ್ಲಾಧ್ಯಕ್ಷ ವಿಶ್ವಂಭರನ್ ಪಣಿಕ್ಕರ್ ಅಧ್ಯಕ್ಷತೆ ವಹಿಸಿದರು. ಸಂಘಟನೆಯ ರಾಜ್ಯಾಧ್ಯಕ್ಷ ಗಣೇಶ್ ಅರಮಂಗಾನಂ ಪ್ರಸ್ತಾಪಿಸಿದರು. ಮುಖ್ಯ ಅತಿಥಿಯಾಗಿ ಮಲಬಾರ್ ದೇವಸ್ವಂ ಮಂಡಳಿ ಸದಸ್ಯ ಸಿ.ಕೆ. ನಾರಾಯಣ ಪಣಿಕ್ಕರ್, ಡಾ. ವತ್ಸನ್ ಪಿಲಿಕ್ಕೋಡ್ ಭಾಗವಹಿಸಿದರು. 

ಪಾಲಕುನ್ನು ಕಳಗ ಶ್ರೀ ಭಗವತೀ ದೇವಸ್ಥಾನದಲ್ಲಿ ೫೦ ವರ್ಷಕ್ಕೂ ಹೆಚ್ಚು ಕಾಲ ಆಚಾರ ಸ್ಥಾನಿಕರಾಗಿ ಸೇವೆ ಸಲ್ಲಿಸುತ್ತಿರುವ ಕಪ್ಪಣಕ್ಕಾಲ್ ಕುಂಞಿಕಣ್ಣನ್ ಆಯತ್ತಾರ್‌ರನ್ನು ಸದಾಶಿವ ಉಳ್ಳಾಲ್ ಸನ್ಮಾನಿಸಿದರು.  ಇದೇ ವೇಳೆ ಸದಾಶಿವ ಉಳ್ಳಾಲ್‌ರ ತ್ರೆಡ್ ಆರ್ಟ್ ಛಾಯಾಚಿತ್ರವನ್ನು ಬೇಬಿನ್ ಡಿ.ಎಸ್ ಉಳ್ಳಾಲ್‌ರಿಗೆ ಹಸ್ತಾಂತರಿಸಿದರು.  ಪಿಲಿಕುಂಜೆ ತಳಂಗರೆ ಭಗವತೀ ಸೇವಾ ಸಂಘದ ಸತೀಶ್ ಎನ್. ಮನ್ನಿಪ್ಪಾಡಿ, ಮಂಜೇಶ್ವರ ಬ್ಲೋಕ್ ಪಂಚಾಯತ್ ಸದಸ್ಯೆ ಅಶ್ವಿನಿ ಎಂ.ಎಲ್, ಮೊಗ್ರಾಲ್ ಪುತ್ತೂರು ಪಂ. ಸದಸ್ಯೆ ಪ್ರಮೀಳಾ ಮಜಾಲ್, ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಕೆ. ಲಕ್ಷ್ಮಣನ್, ರಾಜ್ಯ ಸಮಿತಿ ಕೋಶಾಧಿಕಾರಿ ಸಿ.ಕೆ. ಸದಾನಂದನ್, ಉಪಾಧ್ಯಕ್ಷೆ ಸೌದಾಮಿನಿ ನಾರಾಯಣನ್, ಕಾರ್ಯದರ್ಶಿ ಪ್ರೇಮಾನಂದ ನಡುತ್ತೋಡು, ಸುನಿಲ್ ಕುಮಾರ್, ಎನ್. ಚಂದ್ರನ್, ಗಣೇಶನ್ ಮಾವಿನಕಟ್ಟೆ, ಕೃಷ್ಣಾಭಾ, ಸುಧಾಬಾ ಚೆರ್ವತ್ತೂರು, ಕೆ.ವಿ. ರಾಜನ್,  ಟಿ.ವಿ. ರಾಘವನ್ ಭಾಗವಹಿಸಿದರು.

Leave a Reply

Your email address will not be published. Required fields are marked *

You cannot copy content of this page