ತೂಮಿನಾಡಿನಲ್ಲಿ ಲಾರಿ ಅಪಘಾತ: ಚಾಲಕನ ಕಾಲು ತುಂಡರಿಸಲ್ಪಟ್ಟು ಆಸ್ಪತ್ರೆಗೆ
ಮಂಜೇಶ್ವರ: ತೂಮಿನಾಡಿನಲ್ಲಿ ಶನಿವಾರ ರಾತ್ರಿ 11 ಗಂಟೆಗೆ ಲಾರಿ ಗಳೆರಡು ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಚಾಲಕನ ಎರಡು ಕಾಲುಗಳು ತುಂಡರಿಸಲ್ಪಟ್ಟು ಲಾರಿಯೊಳಗೆ ಸಿಲುಕಿಕೊಂಡ ಘಟನೆ ನಡೆದಿದೆ.
ಚಾಲಕನನ್ನು ಅಗ್ನಿಶಾಮಕದಳ ಹಾಗೂ ಊರವರ ಸಹಾಯದಿಂದ ಹೊರ ತೆಗೆಯಲಾಗಿದೆ. ಕಾಸರ ಗೋಡು ಭಾಗದಿಂದ ಮಂಗಳೂರಿಗೆ ತೆರಳುತ್ತಿದ್ದ ಎರಡು ಲಾರಿಗಳು ತೂಮಿನಾಡು ರಾಷ್ಟ್ರೀಯ ಹೆದ್ದಾರಿ ಯಲ್ಲಿ ಢಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ. ಕರ್ನಾಟಕ ಅಂಕೋಲ ಬಾಳೆಗುರಿ ನಿವಾಸಿ ಅಕ್ಷಯ್ (30)ರನ್ನು ಕಾಲು ತುಂಡಾಗಿ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನೋರ್ವ ಚಾಲಕ ಹುಬ್ಬಳ್ಳಿ ಕಾರವಾರ ನಿವಾಸಿ ಪುರುಷೋತ್ತಮ ಕೂಡಾ ಗಾಯಗೊಂಡಿದ್ದು, ಇವರನ್ನೂ ಆಸ್ಪತ್ರೆಗೆ ದಾಖಲಿ ಲಾಗಿದೆ. ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.