ತೃಶೂರಿನಲ್ಲಿ ಫೆ. ೪ರಂದು ಕಾಂಗ್ರೆಸ್ ಮಹಾಸಮ್ಮೇಳನ: ಖರ್ಗೆ ಉದ್ಘಾಟನೆ

ತಿರುವನಂತಪುರ: ಲೋಕಸಭಾ ಚುನಾವಣಾ ದಿನಾಂಕ ಇನ್ನೇನು ಪ್ರಕಟಗೊಳ್ಳಲಿರುವಂತೆಯೇ ಅದಕ್ಕೆ  ಕೇರಳದಲ್ಲಿ ಅಗತ್ಯದ ಪೂರ್ವಸಿದ್ಧತೆ ನಡೆಸುವ ಸಲುವಾಗಿ ಫೆ. ೪ರಂದು ತೃಶೂರಿನಲ್ಲಿ ಮಹಾ ಸಮ್ಮೇಳನ ನಡೆಸಲು ಕಾಂಗ್ರೆಸ್ ತೀರ್ಮಾನಿಸಿದೆ.  ಸಮ್ಮೇಳನವನ್ನು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ  ಉದ್ಘಾಟಿಸುವರು. ಇದರ ಹೊರತಾಗಿ ಕಾಂಗ್ರೆಸ್‌ನ ಇತರ ಹಲವು ಗಣ್ಯ ನೇತಾgರೂ ಇದರಲ್ಲಿ ಭಾಗವಹಿಸುವರು.

ತೃಶೂರು ಲೋಕಸಭಾ ಕ್ಷೇತ್ರದಲ್ಲಿ ನಟ ಸುರೇಶ್ ಗೋಪಿ ಬಿಜೆಪಿಯ ಉಮೇದ್ವಾರರಾಗುವುದು ಈಗಾಗಲೇ ಖಚಿತಗೊಂಡಂತಾಗಿದೆ.  ರಾಜಕೀಯಾತೀತವಾಗಿ ಅವರು ಭಾರೀ ಜನಬೆಂಬಲ ಹೊಂದಿದ್ದು, ಅದು ಯುಡಿಎಫ್ ಮತ್ತು ಎಲ್‌ಡಿಎಫ್‌ಗೆ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಆದ್ದರಿಂದ ಈ ಕ್ಷೇತ್ರದಲ್ಲಿ ಅತೀ ಹೆಚ್ಚಿನ ನಿಗಾ ಕೇಂದ್ರೀಕರಿಸಲು ಈ ಎರಡೂ ಒಕ್ಕೂಟಗಳು ತೀರ್ಮಾನಿಸಿವೆ.

You cannot copy contents of this page