ತೆಂಗಿನಮರಗಳಿಗೆ ಅಪೂರ್ವ ರೋಗ: ಕೃಷಿಕರು ಆತಂಕದಲ್ಲಿ

ಕಾಸರಗೋಡು: ತೆಂಗಿನ ಮರಗಳಿಗೆ ಬಾಧಿಸತೊಡಗಿದ ಅಪೂ ರ್ವ ರೋಗ ದಿಂದಾಗಿ  ಕೃಷಿಕರು ತೀವ್ರ ಆತಂಕಕ್ಕೊಳಗಾಗಿದ್ದಾರೆ. ಆರಂಭದಲ್ಲಿ ಮಡಲು ಒಣಗತೊಡಗುತ್ತಿದ್ದು, ಅದು ಕ್ರಮೇಣ ಮುಂದುವರಿದು ಕೊನೆಗೆ ತೆಂಗಿನ ಮರದ ತುದಿ ಪೂರ್ಣವಾಗಿ  ಒಣಗಿ ನಾಶಗೊಳ್ಳುವುದಾಗಿದೆ ಹೊಸ ರೋಗವೆಂದು ಕೃಷಿಕರು ತಿಳಿಸುತ್ತಿದ್ದಾರೆ.  ಮೊಗ್ರಾಲ್ ಪುತ್ತೂರು ರಾಷ್ಟ್ರೀಯ ಹೆದ್ದಾರಿ ಬದಿ, ಹೊಳೆ ಸಮೀಪದಲ್ಲಿ ಹಲವು ತೆಂಗಿನ ಮರಗಳಿಗೆ ಈ ರೋಗ ಬಾಧಿಸಿದೆ. ಈ ಹಿಂದೆ ಬದಿಯಡ್ಕ, ಎಣ್ಮಕಜೆ, ಪುತ್ತಿಗೆ, ಕುಂಬಳೆ ಭಾಗದಲ್ಲೂ ಇದೇ ರೀತಿಯ ರೋಗ ಹರಡಿರುವುದು ಕಂಡುಬಂದಿತ್ತು. ತೆಂಗಿನ ಕೃಷಿ ಅಭಿವೃದ್ಧಿಗಾಗಿ ಕೇಂದ್ರ ಸರಕಾರ ಸ್ಥಾಪಿಸಿದ ಸಿಪಿಸಿಆರ್‌ಐ ಪರಿಸರದಲ್ಲೇ ತೆಂಗಿನ ಮರಗಳು  ರೋಗ ಬಾಧಿಸಿ ಸಾಯತೊಡಗಿರುವುದು ಕೃಷಿಕರಲ್ಲಿ ಆತಂಕ ಹೆಚ್ಚಿಸಿದೆ.

You cannot copy contents of this page