ತೆರಿಗೆ ವಂಚಿಸಿ ಸಾಗಿಸುತ್ತಿದ್ದ 23 ಲಕ್ಷ ರೂ. ಮೌಲ್ಯದ ಹಿತ್ತಾಳೆ ಸಾಮಗ್ರಿ ವಶ
ಕಾಸರಗೋಡು: ನಕಲಿ ಸರಕು ಪಟ್ಟಿ ಉಪಯೋಗಿಸಿ ಗುಜರಾತಿಗೆ ಸಾಗಿಸಲೆತ್ನಿಸಿದ ಸುಮಾರು 23 ಲಕ್ಷ ರೂ. ಮೌಲ್ಯದ ಗುಜರಿ ಹಿತ್ತಾಳೆ ಸಾಮಗ್ರಿಗಳನ್ನು ಸರಕು ಸೇವಾ ತೆರಿಗೆ (ಜಿಎಸ್ಟಿ) ಅಧಿಕಾರಿಗಳ ತಂಡ ವಶಪಡಿಸಿದೆ. ಪಟ್ಟಾಂಬಿ ಒಂಙಲ್ಲೂರಿನ ಆರ್.ಎನ್. ಟ್ರೇಡರ್ಸ್ ಎಂಬ ಸಂಸ್ಥೆಯ ಹೆಸರಲ್ಲಿ ಈ ಮಾಲುಗಳಿದ್ದು ಗುಜರಾತಿನ ಜಾಮ್ ನಗರಕ್ಕೆ ಸಾಗಿಸಲೆತ್ನಿಸಲಾಗಿತ್ತು. ಈ ಮಾಲನ್ನು ಅತ್ತ ಸಾಗಿಸುತ್ತಿದ್ದ ವೇಳೆ ದಾರಿ ಮಧ್ಯೆ ಹೊಸದುರ್ಗ ಅಧಿಞ್ಞಾಲ್ನಲ್ಲಿ ಜಿಎಸ್ಟಿ ಅಧಿಕಾರಿಗಳ ತಂಡ ತಡೆದುನಿಲ್ಲಿಸಿ ನಡೆಸಿದ ತಪಾಸಣೆಯಲ್ಲಿ ನಕಲಿ ಸರಕು ಪಟ್ಟಿ ತಯಾರಿಸಿ ತೆರಿಗೆ ವಂಚನೆ ನಡೆಸಿ ಅವುಗಳನ್ನು ಗುಜರಾತಿಗೆ ಸಾಗಿಸುವ ಯತ್ನ ನಡೆಸಲಾಗುತ್ತಿತ್ತೆಂ ಬುವುದು ಸ್ಪಷ್ಟಗೊಂಡಿದೆ.
ಆಪರೇಶನ್ ಪಾಂಟ್ರಿ ಎಂಬ ಹೆಸರಲ್ಲಿ ಜಿಎಸ್ಟಿ ನಡೆಸಿದ ಕಾರ್ಯಾ ಚರಣೆಯಲ್ಲಿ ಈ ವಂಚನೆ ಪತ್ತೆಹಚ್ಚ ಲಾಗಿದೆ. ಇಂತಹ ಕಾರ್ಯಾಚರಣೆ ರಾಜ್ಯದಾದ್ಯಂತವಾಗಿ ನಡೆಯುತ್ತಿದೆ.
ಆರ್.ಎಸ್. ಟ್ರೇಡರ್ಸ್ನ ಹೆಸರಲ್ಲಿ ಕಳೆದ ಎರಡು ವರ್ಷದಲ್ಲಿ ಇದೇ ರೀತಿ ನಕಲಿ ಸರಕು ಪಟ್ಟಿ ತಯಾರಿಸಿ ತೆರಿಗೆ ವಂಚನೆ ನಡೆಸಿ ಆರು ಕೋಟಿ ರೂ.ಗಳ ಸಾಮಗ್ರಿಗಳನ್ನು ಸಾಗಿಸಿರುವುದಾಗಿ ತನಿಖೆಯಲ್ಲಿ ಪತ್ತೆಯಾಗಿದೆಯೆಂದೂ ಆ ಹಿನ್ನೆಲೆಯಲ್ಲಿ ಸಂಸ್ಥೆಯ ರಿಜಿಸ್ಟ್ರೇಶನನ್ನು ಜಿಎಸ್ಟಿ ಇಲಾಖೆ ರದ್ದುಪಡಿಸಿದೆ ಯೆಂದು ಅಧಿಕಾರಿಗಳು ತಿಳಿಸಿದಾರೆ. ಆ ಸಂಸ್ಥೆಗೆ ಜಿಎಸ್ಟಿ ತಂಡ ದಾಳಿ ನಡೆಸಿ ಪರಿಶೀಲನೆ ಆರಂಭಿಸಿದೆ.
ತೆರಿಗೆ ವಂಚನೆ ನಡೆಸಿ ಸಾಮಗ್ರಿಗಳ ಸಾಗಾಟ ನಡೆಸಿದುದಕ್ಕೆ ಸಂಬಂಧಿಸಿ ಆರ್ಎನ್ ಟ್ರೈಡರ್ಸ್ ನಿಂದ ೨೩,೧೬,೪೩೪ ರೂ. ಜುಲ್ಮಾನೆ ವಸೂಲಿ ಮಾಡಲಾಗಿ ಯೆಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾರಾಟ ತೆರಿಗೆ ಇಲಾಖೆಯ ಗುಪ್ತಚರ ವಿಭಾಗದ ಕಾಸರಗೋಡು ಉಪ ಆಯುಕ್ತ ಟಿ.ಕೆ. ಪದ್ಮನಾಭನ್ರ ಮೇಲ್ನೋಟದಲ್ಲಿ ಜಿಎಸ್ಟಿಯ ಹೊಸದುರ್ಗ ಘಟಕದ ಇಂಟೆಲಿಜೆನ್ಸ್ ಅಧಿಕಾರಿ ಪಿ.ವಿ. ರತ್ನಾಕರನ್ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ.