ತೊಟ್ಟಿಲಿನ ಹಗ್ಗ ಕುತ್ತಿಗೆಗೆ ಸಿಲುಕಿ ಬಾಲಕಿ ದಾರುಣ ಮೃತ್ಯು

ಮಲಪ್ಪುರಂ: ತೊಟ್ಟಿಲಿನ ಹಗ್ಗ ಕುತ್ತಿಗೆಗೆ ಸಿಲುಕಿ ಆರರ ಹರೆಯದ ಬಾಲಕಿ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಮಲಪ್ಪುರಂ ಕುಟ್ಟಿಪುರ ಬಾಂಗ್ಲಾಕುನ್ನು ಎಂಬಲ್ಲಿನ ಹಯಾ ಫಾತಿಮ ಎಂಬಾಕೆ ಮೃತಪಟ್ಟ ದುರ್ದೈವಿಯಾಗಿದ್ದಾಳೆ. ನಿನ್ನೆ ರಾತ್ರಿ ಈ ದಾರುಣ ಘಟನೆ ನಡೆದಿದೆ. ತೊಟ್ಟಿಲಿನಿಂದ ಬಾಲಕಿ ಇಳಿಯುತಿ ದ್ದಾಗ ಕುತ್ತಿಗೆಗೆ ಹಗ್ಗ ಸಿಲುಕಿತ್ತು. ಇದರಿಂದ ಬಾಲಕಿಯ ಬೊಬ್ಬೆ ಕೇಳಿ ತಲುಪಿದ ಮನೆ ಮಂದಿ ಕೂಡಲೇ ಹಗ್ಗವನ್ನು ಬಿಡಿಸಿ ಬಾಲಕಿಯನ್ನು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.

You cannot copy contents of this page