ತೋಡಿಗೆ ಬಿದ್ದು ನರ್ಸ್ ಮೃತ್ಯು
ಕಾಸರಗೋಡು: ಬ್ಲೋಕ್ ಟ್ರೈಬಲ್ ಹೆಲ್ತ್ ನರ್ಸ್ ತೋಡಿಗೆ ಬಿದ್ದು ಮೃತ ಪಟ್ಟರು. ವೆಸ್ಟ್ ಎಳೇರಿ ಮುಡಂದೆನ್ ಪಾರ ನಿವಾಸಿ ಮಾಣಿಕ- ಲಕ್ಷ್ಮಿ ದಂಪತಿ ಪುತ್ರಿ ಬಿಂದು (49) ಮೃತಪಟ್ಟವರು. ನಿನ್ನೆ ಸಂಜೆ ಮನೆ ಸಮೀಪದ ತೋಡಿಗೆ ಇವರು ಬಿದ್ದಿದ್ದು, ಸ್ಥಳೀಯರು ಕೂಡಲೇ ಇವರನ್ನು ಮಾಲೋಮ್ ಆಸ್ಪತ್ರೆಗೆ ತಲುಪಿಸಿದರೂ ಆವಾಗಲೇ ಸಾವು ಸಂಭವಿಸಿದೆ. ನರ್ಕಿಲಕ್ಕಾಡ್ ಕುಟುಂಬ ಆರೋಗ್ಯ ಕೇಂದ್ರದ ನೌಕರೆಯಾಗಿದ್ದಾರೆ. ಮೃತರು ತಂದೆ, ತಾಯಿ, ಪತಿ ಸಾಜನ್, ಮಕ್ಕಳಾದ ತೀರ್ಥ,ತೃಷ್ಣ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.