ತ್ಯಾಜ್ಯ ಹಾಕಲು ಪಂಚಾಯತ್ ಬಾವಿ ಬಾಯಾರುಪದವಿನಲ್ಲಿ ಬತ್ತಿದ ಜಲಮೂಲ

ಪೈವಳಿಕೆ: ಕುಡಿಯುವ ನೀರಿ ಗಾಗಿ ಜನರು ಪರದಾಡುತ್ತಿರುವ ಮಧ್ಯೆ ಪಂಚಾಯತ್ ಬಾವಿಗೆ ತ್ಯಾಜ್ಯವನ್ನು  ಹಾಕಿ ಬಾವಿಯನ್ನು ಉಪಯೋಗ ಶೂನ್ಯಗೊಳಿಸಲಾ ಗಿದೆ. ಪೈವಳಿಕೆ ಪಂಚಾಯತ್‌ನ ಬಾಯಾರುಪದವು ಪೇಟೆಯಲ್ಲಿರುವ ಬಾವಿಗೆ ತ್ಯಾಜ್ಯ ಸುರಿದು ಉಪಯೋ ಗಶೂನ್ಯವ ನ್ನಾಗಿಸಿರುವುದಾಗಿ ಸಾರ್ವಜನಿಕರು ದೂರಿದ್ದಾರೆ. ಪಂಚಾಯತ್‌ನಿಂದ ಸುಮಾರು ೩೦ ವರ್ಷಗಳ ಹಿಂದೆ ನಿರ್ಮಿಸಲಾದ ಈ ಬಾವಿಯಲ್ಲಿ ಬೇಸಿಗೆಯಲ್ಲಿಯೂ ನೀರು ಲಭಿಸುತ್ತಿದ್ದು, ಈ ಪ್ರದೇಶದ ಮನೆಯವರು, ವ್ಯಾಪಾರಿಗಳು ಈ ಬಾವಿಯನ್ನೇ ಆಶ್ರಯಿಸುತ್ತಿದ್ದರು. ಸುಮಾರು ೧೫ರಿಂದ ೨೦ರಷ್ಟು ಕೋಲು ಆಳದ ಬಾವಿ ಇದಾಗಿದೆ. ಆದರೆ ಕಳೆದ ಒಂದೆರಡು ವರ್ಷಗಳಿಂದ ಬಾವಿಗೆ ನಿರಂತರ ವಿವಿಧ ಕಡೆಗಳಿಂದ ರಾತ್ರಿಹೊತ್ತಿನಲ್ಲಿ ತ್ಯಾಜ್ಯ ತಂದು ಸುರಿದು ಬಾವಿಯ ನೀರನ್ನು ಮಲಿನ ಗೊಳಿಸುತ್ತಿರುವುದಾಗಿ ದೂರಲಾ ಗಿದೆ.  ಈಗ ತ್ಯಾಜ್ಯ ತುಂಬಿಕೊಂಡು ನೀರು ಪೂರ್ತಿ ಬತ್ತಿಹೋಗಿದ. ಪರಿಸರದಲ್ಲಿ ಪೊದೆಗಳು ತುಂಬಿ ಶೋಚನೀಯಾವಸ್ಥೆಗೆ ತಲುಪಿದೆ ಲಕ್ಷಾಂತರ ರೂ. ವೆಚ್ಚದಿಂದ ನಿರ್ಮಿಸಲಾದ ಈ ಬಾವಿ ಉಪಯೋಗಶೂನ್ಯಗೊಳ್ಳುತ್ತಿರುವುದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣಾವಾಗಿದೆ. ಇನ್ನಾದರೂ ಪಂಚಾಯತ್ ಅಧಿಕಾರಿಗಳು ಎಚ್ಚೆತ್ತುಕೊಂಡು ತ್ಯಾಜ್ಯ ಎಸೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು, ಈ ಬಾವಿಯನ್ನು ದುರಸ್ತಿಗೊಳಿಸಿ ಜನರು ಪ್ರಯೋಜನ ಪಡೆಯುವಂತೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

RELATED NEWS

You cannot copy contents of this page