ದ.ಕ. ಜಿಲ್ಲೆಯ ಮಕ್ಕಳಲ್ಲಿ ದೃಷ್ಟಿ ಸಮಸ್ಯೆ
ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯ ಶಾಲೆಗಳಲ್ಲಿ ಆರೋಗ್ಯ ಇಲಾಖೆ ನಡೆಸಿದ ಪರಿಶೀಲನೆಯಲ್ಲಿ 5000ದಷ್ಟು ಮಕ್ಕಳಿಗೆ ದೃಷ್ಟಿ ಸಮಸ್ಯೆ ಪತ್ತೆಹಚ್ಚಲಾಗಿದೆ. 4000ಕ್ಕೂ ಅಧಿಕ ಮಕ್ಕಳು ದಿನವೂ ಕನ್ನಡಕ ಧರಿಸಬೇಕಾಗಿದೆ. 1376 ಶಾಲೆಗಳಲ್ಲಿ ಆರೋಗ್ಯ ಇಲಾಖೆ ನೇತ್ರ ತಪಾಸಣೆ ನಡೆಸಿತ್ತು. ಇದರಲ್ಲಿ ಸರಕಾರಿ ಶಾಲೆಗಳ 1,01,592 ವಿದ್ಯಾರ್ಥಿಗಳನ್ನು ಹಾಗೂ ಅನುದಾನಿತ ಶಾಲೆಗಳ 44,359 ವಿದ್ಯಾರ್ಥಿಗಳನ್ನು ಪರಿಶೀಲಿಸಲಾಗಿದೆ. ಇದರಲ್ಲಿ 660 ವಿದ್ಯಾರ್ಥಿಗಳು ದೃಷ್ಟಿದೋಷ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಪತ್ತೆಹಚ್ಚಲಾಗಿದೆ.