ದ.ಕ. ಜಿಲ್ಲೆಯಲ್ಲಿ ಮತೀಯ ಸಾಮರಸ್ಯ ಸಮಸ್ಯೆ: ಜಿಲ್ಲೆಯ ಎಲ್ಲಾ ತಪಾಸಣಾ ಕೇಂದ್ರಗಳಲ್ಲೂ ಬಿಗು ಪೊಲೀಸ್ ನಿಯಂತ್ರಣ

ಕಾಸರಗೋಡು: ದ.ಕ. ಜಿಲ್ಲೆಯ ಕೆಲೆವೆಡೆ ಕೋಮುಸಾಮರಸ್ಯ ಹದಗೆಡುವಂತೆ ಮಾಡುವ ಕೆಲವೊಂದು ಘಟನೆಗಳು ನಡೆದಿ ರುವ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯ ಗಡಿ ಪ್ರದೇಶಗಳಲ್ಲಿ ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿಯ ನಿರ್ದೇಶದಂತೆ ಬಿಗು ಪೊಲೀಸ್ ನಿಯಂತ್ರಣ ಏರ್ಪಡಿಸಲಾಗಿದೆ. ಇದರಂತೆ ತಲಪ್ಪಾಡಿ,ಪೆರ್ಲ, ಆದೂರು, ಪಾಣತ್ತೂರು, ಕೆದುಂ ಬಾಡಿ, ಆನೆಕಲ್ಲು ಮೊದಲಾದ ಕೇರಳ- ಕರ್ನಾಟಕ ಗಡಿ ಪ್ರದೇಶದ ತಪಾಸಣಾ ಕೇಂದ್ರಗಳಲ್ಲಿ ಪೊಲೀಸ್ ಬಿಗು ನಿಯಂತ್ರಣ ಏರ್ಪಡಿಸಲಾ ಗಿದೆ. ಈ ತಪಾಸಣಾ ಕೇಂದ್ರಗಳಲ್ಲಿ ಸಾಗುವ ಎಲ್ಲಾ ವಾಹನಗಳನ್ನು ಪೊಲೀಸರು ಬಿಗು ತಪಾಸಣೆಗೊಳ ಪಡಿ ಸತೊಡಗಿದ್ದಾರೆ. ವಾಹನಗಳಲ್ಲಿ ಸಂಚರಿಸುವ ಎಲ್ಲರ ಸಂಪೂರ್ಣ ಮಾಹಿತಿ ಪಡೆದ ಬಳಿಕವಷ್ಟೇ ಅವರನ್ನು ಸಾಗಬಿಡಲಾಗುತ್ತಿದೆ. ಶಂಕಿತರಿದ್ದಲ್ಲಿ ಅವರನ್ನು ವಶಕ್ಕೆ ತೆಗೆದು ವಿಚಾರಿಸಲಾಗುತ್ತಿದೆ. ರಾಜ್ಯ  ಪೊಲೀಸ್ ಗುಪ್ತಚರ ಇಲಾಖೆ ನೀಡಿದ ಮಾಹಿತಿಯಂತೆ ಈ ಬಿಗು ನಿಯಂತ್ರಣ ಏರ್ಪಡಿಸಲಾಗಿದೆ.

You cannot copy contents of this page