ದಂಪತಿಯೆಂದು ತಿಳಿಸಿ ಕ್ವಾರ್ಟರ್ಸ್‌ನಲ್ಲಿ ವಾಸಿಸಿ ಗಾಂಜಾ ಮಾರಾಟ: ಜೋಡಿ ಸೆರೆ

ಹೊಸದುರ್ಗ: ದಂಪತಿಗಳೆಂದು ತಿಳಿಸಿ ಕ್ವಾರ್ಟರ್ಸ್ ಬಾಡಿಗೆಗೆ ಪಡೆದು ವಾಸಿಸಿ ಅಲ್ಲಿ ಗಾಂಜಾ ಮಾರಾಟ  ನಡೆಸುತ್ತಿದ್ದ ಜೋಡಿಯನ್ನು  ತಳಿಪರಂಬ ಪೊಲೀಸರು ಸೆರೆಹಿಡಿದಿದ್ದಾರೆ. ಅಸ್ಸಾಂ ನಿವಾಸಿ ಮೊನೂರ ಬೀಗಂ (೨೦), ಉತ್ತರಪ್ರದೇಶದ ಸಿಬಾರ್ವನಗರ್ ನಿವಾಸಿ ಅಬ್ದುಲ್ ರಹ್ಮಾನ್ ಅನ್ಸಾರಿ (೨೧) ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆ.  ಇವರ ಕೈಯಿಂದ ೧.೨೦೦ ಕಿಲೋ ಗಾಂಜಾ ವಶಪಡಿಸಲಾಗಿದೆ. ಆರೋಪಿಗಳು ದಂಪತಿಗಳೆಂದು ತಿಳಿಸಿ ಕರಿಂಬತ್ ಎಂಬಲ್ಲಿನ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದರು. ಅಲ್ಲಿಗೆ ರಾತ್ರಿ ಹೊತ್ತಿನಲ್ಲಿ ಅಪರಿಚಿತರು ಬರುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ಪೊಲೀಸರು  ನಡೆಸಿದ ತನಿಖೆಯಲ್ಲಿ ಕ್ವಾರ್ಟರ್ಸ್‌ನಲ್ಲಿ  ಗಾಂಜಾ ಮಾರಾಟ ನಡೆಸುತ್ತಿರುವುದು ತಿಳಿದುಬಂದಿದೆ. ಇದರಂತೆ ತಳಿಪರಂಬ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಬೆನ್ನಿಲಾಲ್ ಕಣ್ಣೂರು ಜಿಲ್ಲಾ ಮಾದಕ ವಸ್ತು ವಿರುದ್ಧ ಸ್ಕ್ವಾಡ್‌ನ ಸಹಾಯದೊಂದಿಗೆ ನಿನ್ನೆ ರಾತ್ರಿ ಕ್ವಾರ್ಟರ್ಸ್‌ಗೆ ಸುತ್ತುವರಿದು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಯುವಕ ಹಾಗೂ ಯುವತಿ ವಿರುದ್ಧ ತನಿಖೆ ಮುಂದುವರಿಯುತ್ತಿಯೆಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page