ದಸ್ತಾವೇಜು ಬರಹಗಾರರ ಜಿಲ್ಲಾ ಸಮ್ಮೇಳನ, ಮೆರವಣಿಗೆ

ಬದಿಯಡ್ಕ: ಆಲ್ ಕೇರಳ ಡೋಕ್ಯುಮೆಂಟ್ ರೈರ‍್ಸ್ ಹಾಗೂ ಸ್ಕೆçöÊಬ್ಸ್ ಅಸೋಸಿಯೇಶನ್‌ನ ದಸ್ತಾ ವೇಜು ಬರಹಗಾರರ ಅಸೋಸಿಯೇ ಶನ್‌ನ ಕಾಸರಗೋಡು ಜಿಲ್ಲಾ ಸಮ್ಮೇ ಳನ ಬದಿಯಡ್ಕ ಶ್ರೀ ಗಣೇಶ ಮಂದಿ ರದಲ್ಲಿ ಜರಗಿತು. ಸ್ವಾಗತ ಸಮಿತಿ ಅಧ್ಯಕ್ಷ ಕೆ.ಲಕ್ಷö್ಮಣ ಪ್ರಭು ಬದಿಯಡ್ಕ ಧ್ವಜಾರೋಹಣಗೈದರು. ನಂತರ ಬದಿಯಡ್ಕ ಪೇಟೆಯಲ್ಲಿ ಮೆರವಣಿಗೆ ನಡೆಯಿತು. ನಂತರ ನಡೆದ ಪ್ರತಿನಿಧಿ ಸಮ್ಮೇಳನವನ್ನು ರಾಜ್ಯ ಅಧ್ಯಕ್ಷ ಕೆ.ಜಿ.ಇಂಧುಕಲಾಧರನ್ ದೀಪಬೆಳಗಿಸಿ ಉದ್ಘಾಟಿಸಿದರು. ಜಿಲ್ಲಾ ಅಧ್ಯಕ್ಷ ಪಿ.ಪಿ.ಕುಂಞÂಕೃಷ್ಣನ್ ನಾಯರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಪಾಧ್ಯಕ್ಷೆ ಎ.ವಿ.ಸೀಮ ಅಗಲಿದ ಹಿರಿಯರ ಸ್ಮರಿಸಿದರು. ರಾಜ್ಯ ಸಲಹಾ ಸಮಿತಿ ಗೌರವಾಧ್ಯಕ್ಷ ಒ.ಎಂ. ದಿನಕರನ್ ಮಾತ ನಾಡಿದರು. ಜಿಲ್ಲಾ ಕೋಶಾಕಾರಿ ವಿ.ವಿ. ವಿನೋದ್ ಲೆಕ್ಕಪತ್ರ, ರಾಜ್ಯ ಪ್ರಧಾನ ಕಾರ್ಯದರ್ಶಿ ಎ. ಅನ್ಸಾರ್ ವರದಿ ಮಂಡಿಸಿದರು. ಸಜೀವನ್ ಕಲ್ಲಿಕಂಡಿ, ಕೆ.ಬೇಬಿಲತಾ, ಕೆ. ಬಾಲರಾಮನ್ ನಾಯರ್ ಪಾಲ್ಗೊಂಡಿದ್ದರು. ಜಿಲ್ಲಾ ಕಾರ್ಯದರ್ಶಿ ಸುನಿಲ್ ಕುಮಾರ್ ಕೊಟ್ಟರ ಸ್ವಾಗತಿಸಿದರು.

You cannot copy contents of this page