ದೇಶದಲ್ಲಿ ದುಷ್ಕೃತ್ಯಕ್ಕೆ ಐಸಿಸ್, ಸಿಮಿ, ಐಎಂನಿಂದ ಜಂಟಿ ಪ್ಲಾನ್
ಮುಂಬೈ: ಇದುವರೆಗೂ ಭಾರತ ದಲ್ಲಿ ಪ್ರತ್ಯೇಕವಾಗಿ ಕಾರ್ಯವೆಸಗುತ್ತಾ ಬಂದಿರುವ ಇಸ್ಲಾಮಿಕ್ ಸ್ಟೇಟ್ (ಐಸಿಸ್), ಸಿಮಿ ಮತ್ತು ಇಂಡಿಯನ್ ಮುಜಾಹಿದ್ದೀನ್ (ಐಎಂ) ಭಯೋ ತ್ಪಾದಕ ಸಂಘಟನೆಗಳು ಇದೀಗ ಭಾರತದಲ್ಲಿ ದುಷ್ಕೃತ್ಯವೆಸಗಳು ಒಂದಾಗಿ ಕಾರ್ಯಾಚರಣೆ ನಡೆಸ ತೊಡಗಿದೆ ಯೆಂಬ ಸ್ಫೋಟಕ ಮಾಹಿತಿಯನ್ನು ತನಿಖಾ ಸಂಘಟನೆಗಳು ಹೊರಗೆಡಹಿವೆ.
ಪುಣೆಯ ಕೊಂಡ್ವಾ ಪ್ರದೇಶದಲ್ಲಿ ನಡೆದ ಬಾಂಬ್ ತಯಾರಿಕಾ ಶಿಬಿರದ ಕುರಿತು ತನಿಖೆ ನಡೆಸುತ್ತಿರುವ ತನಿಖಾ ಸಂಸ್ಥೆಗಳು ಈ ಮಾಹಿತಿ ಪತ್ತೆಹಚ್ಚುವಲ್ಲಿ ಯಶಸ್ವಿಯಾ ಗಿವೆ. ಈ ಮೂರು ಉಗ್ರಗಾಮಿ ಸಂಘಟನೆಗಳ ಸಿದ್ದಾಂತದಲ್ಲಿ ಭಿನ್ನತೆ ಇದ್ದರೂ ಸದ್ಯ ಅದನ್ನೆಲ್ಲ್ಲಾ ಬದಿಗಿರಿಸಿ ಒಂದಾಗಿ ಕಾರ್ಯಾಚರಣೆ ನಡೆಸಲು ಬದ್ಧತೆ ವ್ಯಕ್ತಪಡಿಸಿವೆ. ಈ ಪ್ರಕರಣ ಸಂಬಂಧ ಬಂಧಿತರಾದವರೆಲ್ಲಾ ಮಾಹಿತಿ ತಂತ್ರಜ್ಞಾನ, ಸೈಬರ್, ಸುಧಾರಿತ ಸ್ಫೋಟಕ ತಯಾರಿಯಲ್ಲಿ ಅತ್ಯಂತ ನುರಿತ ತರಬೇತಿ ಪಡೆದುಕೊಂಡವ ರಾಗಿದ್ದಾರೆಂದು ತನಿಖಾ ಸಂಸ್ಥೆಯ ಮೂಲಗಳು ತಿಳಿಸಿವೆ.
ಈ ಮೂರು ಸಂಘಟನೆಗಳನ್ನು ಭಾರತ ಸರಕಾರ ನಿಷೇಧ ಹೇರಿ ಅವುಗಳ ವಿರುದ್ಧ ಕಠಿಣ ಕ್ರಮ ಕೈಗೊಂಡ ಬಳಿಕ ಅವುಗಳ ಕಾರ್ಯಾಚರಣೆ ಬಹುತೇಕ ನಿಂತೇ ಹೋಗಿತ್ತು ಎನ್ನುವ ಹಂತಕ್ಕೆ ಬಂದಿತ್ತು. ಆದರೆ ಈ ಸಂಘಟನೆಗಳ ಕಾರ್ಯಕರ್ತರು ಮತ್ತೆ ತನಿಖಾ ಸಂಸ್ಥೆಗಳ ಕಣ್ತಪ್ಪಿಸಿ ತಮ್ಮ ಗುಪ್ತ ಚಟುವಟಿಕೆಗಳನ್ನು ಪುನರಾರಂಭಿಸಿವೆ ಎಂಬ ಮಾಹಿತಿ ಪುಣೆ ಪ್ರಕರಣದ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಪುಣೆ ಸ್ಫೋಟ ಸಂಚಿನ ಪ್ರಕರಣಕ್ಕೆ ಸಂಬಂಧಿಸಿ ಎನ್‌ಐಎ ಕೆಲ ದಿನಗಲ ಅವಧಿಯಲ್ಲಿ ನಾಲ್ವರನ್ನು ಬಂಧಿಸಿತ್ತು. ಇವರನ್ನು ಎನ್‌ಐಎ ತೀವ್ರವಾಗಿ ವಿಚಾರಣೆಗೊಳಪಡಿಸಿದಾಗ ಭಾರತದ ಹಲವು ಭಯೋತ್ಪಾದಕ ಸಂಘಟನೆ ಗಳಿಗೆ ವಿದೇಶಗಳಿಂದಲೂ ಭಾರೀ ಆರ್ಥಿಕ, ಇನ್ನಿತರ ಸಹಾಯಗಳೂ ಲಭಿಸುತ್ತಿದೆ ಎಂಬ ಕಳವಳಕಾರಿ ಅಂಶವೂ ಬೆಳಕಿಗೆ ಬಂದಿದೆ.