ದೇಹಕ್ಕೆ ತುಳಿದುದನ್ನು ಪ್ರಶ್ನಿಸಿದ ದ್ವೇಷ ಯುವಕನಿಗೆ ಇರಿದು ಕೊಲೆಗೆತ್ನಿಸಿದ ಆರೋಪಿ ಸೆರೆ

ಕಾಸರಗೋಡು: ದೇಹಕ್ಕೆ ಮೆಟ್ಟಿದುದನ್ನು ಪ್ರಶ್ನಿಸಿದ ದ್ವೇಷದಿಂದ ಯುವಕನನ್ನು ಇರಿದು ಕೊಲೆಗೈಯ್ಯ ಲೆತ್ನಿಸಿದ ಪ್ರಕರಣದ ಆರೋಪಿ ಸೆರೆಗೀಡಾಗಿದ್ದಾನೆ.

ಉತ್ತರಪ್ರದೇಶದ ಪ್ರಯಾಗ್ ಗೋಸಿನ ಬಿಂಕಾ ರೋಡ್‌ನ ಅಮಾನ್ (21) ಎಂಬಾತ ಬಂಧಿತ ಆರೋಪಿ ಯಾಗಿದ್ದಾನೆ. ವಿದ್ಯಾನಗರ ಇನ್‌ಸ್ಪೆಕ್ಟರ್ ಯು.ಪಿ. ವಿಪಿನ್‌ರ ನಿರ್ದೇಶದಂತೆ ಎಸ್‌ಐ ವಿ.ಪಿ. ಅಜೀಶ್ ಉತ್ತರ ಪ್ರದೇಶಕ್ಕೆ ತೆರಳಿ ಆರೋಪಿಯನ್ನು  ಬಂಧಿಸಿದ್ದಾರೆ. ಚೆರ್ಕಳ ಬೇರ್ಕದ ಕ್ವಾರ್ಟರ್ಸ್‌ವೊಂದರಲ್ಲಿ ವಾಸಿಸುತ್ತಿದ್ದ  ಉತ್ತರಪ್ರದೇಶ ನಿವಾಸಿಯಾದ ಮುಹಮ್ಮದ್ ಅನ್ಸಾರಿ (24)ಗೆ ಇರಿದು ಗಾಯಗೊಳಿಸಲಾಗಿತ್ತು. 2024 ಡಿ. 20ರಂದು ರಾತ್ರಿ ಘಟನೆ ನಡೆದಿತ್ತು. ದೂರುಗಾರ ವಾಸಿಸುವ ಕ್ವಾರ್ಟರ್ಸ್‌ಗೆ ಕೆಲವುತಿಂಗಳ ಹಿಂದೆ ಅಮಾನ್ ತಲುಪಿ ಅಲ್ಲಿ ವಾಸಿಸುತ್ತಿ ದ್ದನು.  ಮೊಹಮ್ಮದ್ ಅನ್ಸಾರಿಗೆ ಅಮಾನ್ ಮೆಟ್ಟಿದ್ದನೆಂದೂ ಅದನ್ನು ಪ್ರಶ್ನಿಸಿದ ದ್ವೇಷದಿಂದ ಚಾಕುವಿನಿಂದ ಇರಿದು ಕೊಲೆ ಗೈಯ್ಯಲೆತ್ನಿಸಿದನೆಂದು ಕೇಸು ದಾಖಲಾಗಿದೆ. ಘಟನೆ ಬಳಿಕ ಆರೋಪಿಯಾದ ಅಮಾನ್ ತಲೆಮರೆಸಿಕೊಂಡಿದ್ದನು.

You cannot copy contents of this page