ದೌರ್ಜನ್ಯ ಯತ್ನದಿಂದ ಪಾರಾಗಲು ಹೊಟೇಲ್ ಮಹಡಿಯಿಂದ ಹಾರಿದ ಯುವತಿ ಗಂಭೀರ
ಕಲ್ಲಿಕೋಟೆ: ದೌರ್ಜನ್ಯ ಯತ್ನ ವನ್ನು ಹಿಮ್ಮೆಟ್ಟಿಸಲು ಹೊಟೇಲ್‌ನ ಮೇಲಿನ ಮಹಡಿಯಿಂದ ಹಾರಿದ ಪಯ್ಯನ್ನೂರು ನಿವಾಸಿಯಾದ ಯುವತಿ ಗಂಭೀರ ಗಾಯಗೊಂಡಿ ದ್ದಾರೆ. ಮುಕ್ಕಂ ಕಲ್ಲಿಕೋಟೆ ರಸ್ತೆಯ ಮಾಂಬಾಟದಲ್ಲಿ ಹೊಸದಾಗಿ ಆರಂಭಿಸಿದ ಹೊಟೇಲ್‌ನ ನೌಕರೆಯಾಗಿದ್ದಾರೆ ಈಕೆ. ಪಯ್ಯನ್ನೂರು ನಿವಾಸಿಯಾದ 29ರ ಹರೆಯದ ಯುವತಿ ದೌರ್ಜನ ಗೈಯ್ಯಲು ಬಂದಾಗ ಅದರಿಂದ ಪಾರಾಗಲು ಹೊಟೇಲ್ ಕಟ್ಟಡದಿಂದ ಕೆಳಗೆ ಹಾರಿದ್ದಾರೆನ್ನಲಾಗಿದೆ. ನಿನ್ನೆ ರಾತ್ರಿ 11 ಗಂಟೆಗೆ ಘಟನೆ ನಡೆದಿದೆ.
ಹೊಟೇಲ್ ಮಾಲಕ ಉಪಟಳ ನೀಡಲು ಯತ್ನಿಸಿದಾಗ ಕೆಳಗೆ ಹಾರಿರುವು ದಾಗಿ ಯುವತಿ ಆಸ್ಪತ್ರೆಯಲ್ಲಿ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಬೆನ್ನೆಲುಬಿಗೆ ಗಂಭೀರ ಗಾಯಗೊಂಡ ಯುವತಿ ಈಗ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಯಲ್ಲಿದ್ದಾರೆ. ಅತಿಕ್ರಮಣ, ಮಹಿ ಯರಿಗೆ ಉಪಟಳ ನೀಡುವುದು ಎಂಬೀ ಕಾಯ್ದೆಗಳನುಸಾರ ಹೊಟೇ ಲ್ ಮಾಲಕ ದೇವದಾಸ್, ರಿಯಾಸ್, ಸುರೇಶ್ ಎಂಬಿವರ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ಘಟನೆಯ ಬಳಿಕ ಈ ಮೂವರು ನಾಪತ್ತೆಯಾಗಿದ್ದಾರೆನ್ನಲಾಗಿದೆ.