ದ್ವಿಚಕ್ರ ವಾಹನ ಪ್ರಯಾಣ ವೇಳೆ ಹಿಂದಿನ ಸೀಟಿನಲ್ಲಿ ಕುಳಿತವರು ಮಾತನಾಡಿದಲ್ಲಿ ದಂಡ

ತಿರುವನಂತಪುರ: ದ್ವಿಚಕ್ರದಲ್ಲಿ ಸಂಚರಿಸುತ್ತಿರುವ ವೇಳೆ ಅದರ ಹಿಂದಿನ ಸೀಟಿನಲ್ಲಿ ಕುಳಿತವರು ಆ ವಾಹನವನ್ನು ಚಲಾಯಿಸುವ ವ್ಯಕ್ತಿಯೊಂದಿಗೆ ಮಾತನಾಡಿದಲ್ಲಿ ಇನ್ನು ಅಂತವರಿಗೆ ದಂಡ ವಿಧಿಸಲಾಗುವುದು. ದ್ವಿಚಕ್ರ ವಾಹನ ಚಲಾಯಿಸುವ ವ್ಯಕ್ತಿಯೊಂದಿಗೆ ಅದರ ಹಿಂದಿನ ಆಸನದಲ್ಲಿ ಕುಳಿತುಕೊಂಡವರು ಸಂಚಾರದ ವೇಳೆ, ಜೋರಾಗಿ ಮಾತನಾಡಿದಲ್ಲಿ ಅದು ಆ ವಾಹನ ಚಲಾಯಿಸುವ ವ್ಯಕ್ತಿಯ ಗಮನ ಬೇರೆಡೆಗೆ ಸರಿದು ಅದು ಅಪಘಾತಕ್ಕೂ ದಾರಿ ಮಾಡಿಕೊಡುವ ಸಾಧ್ಯತೆ ಇದೆ. ಈ ರೀತಿಯ ಅಪಘಾತಗಳು ಹಲವೆಡೆಗಳಲ್ಲಿ ನಡೆದಿದೆ. ಆದ್ದರಿಂದ ಅದನ್ನು ತಡೆಗಟ್ಟಲು ರಾಜ್ಯ ಮೋಟಾರು ವಾಹನ ಇಲಾಖೆ ಇಂತಹ  ಹೊಸ ಕ್ರಮಕ್ಕೆ ಮುಂದಾಗಿದೆ. ಈ ಕುರಿತಾದ ಸುತ್ತೋಲೆಯನ್ನು ರಾಜ್ಯದಲ್ಲಿ ಎಲ್ಲಾ ಆರ್‌ಟಿಒ ಕಚೇರಿಗಳಿಗೂ ಕಳುಹಿಸಿಕೊಡಲಾಗಿದೆ.

Leave a Reply

Your email address will not be published. Required fields are marked *

You cannot copy content of this page