ದ್ವಿತೀಯ ವಂದೇ ಭಾರತ್ ರೈಲಿನ ಚೊಚ್ಚಲ ಸೇವೆ ಆರಂಭ

ಕಾಸರಗೋಡು: ಕಳೆದ ಭಾನುವಾರದಂದು ಪ್ರಧಾನಮಂತ್ರಿ ವರ್ಚುವಲ್ ಮೂಲಕ ಉದ್ಘಾಟಿಸಿದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಚೊಚ್ಚಲ ಸೇವೆ ಇಂದು ಬೆಳಿಗ್ಗೆ ಕಾಸರಗೋಡು ರೈಲು ನಿಲ್ದಾಣದಿಂದ ತಿರುವನಂತಪುರಕ್ಕೆ ಆರಂಭಿಸಿದೆ.

ಈ ರೈಲು ನಿನ್ನೆ ಸಂಜೆ ೪.೦೫ಕ್ಕೆ ತಿರುವನಂ ತಪುರದಿಂದ ಕಾಸರಗೋಡಿನತ್ತ ಪ್ರಯಾಣ ಆರಂಭಿಸಿ  ಬಳಿಕ ನಿನ್ನೆ ರಾತ್ರಿ ೧೧.೫೮ಕ್ಕೆ ಕಾಸರಗೋಡಿಗೆ ಆಗಮಿಸಿದೆ. ನಂತರ ಇಂದು ಬೆಳಿಗ್ಗೆ ೭ಕ್ಕೆ ಇಲ್ಲಿಂದ ತಿರುವನಂತಪುರಕ್ಕೆ ಚೊಚ್ಚಲ ಸೇವೆ ಆರಂಭಿಸಿದೆ.

ಈ ರೈಲಿನ ಚೇಯರ್‌ಕಾರ್‌ನಲ್ಲಿ ೯೬ ಆಸನಗಳು ಮತ್ತು ಎಕ್ಸಿಕ್ಯೂಟಿವ್ ಕ್ಲಾಸ್‌ನಲ್ಲಿ ೧೧ ಸೀಟುಗಳಿವೆ. ವಾರದಲ್ಲಿ ಮಂಗಳವಾರವನ್ನು ಹೊರತುಪಡಿಸಿ ಇತರ ಆರು ದಿನಗಳಲ್ಲಿ ಈ ರೈಲು ಸೇವೆ ನಡೆಸಲಿದೆ.

ಕಾಸರಗೋಡು- ತಿರುವನಂತಪುರ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ದ್ವಿತೀಯ ರೈಲು ಕೇಸರಿ ಮತ್ತು ಬಿಳಿ ಬಣ್ಣ ಹೊಂದಿದೆ. ಅದನ್ನು ಹೊರತುಪಡಿಸಿ ಮುಂದೆ ನೀಲಿ ಮತ್ತು ಬಿಳಿ ಬಣ್ಣದ ರೈಲು ನೀಡುವ ಸಾಧ್ಯತೆಯಿದೆ. ಇದಕ್ಕಾಗಿ  ಚೆನ್ನೈ ಬೇಸಿನ್ ಬ್ರಿಡ್ಜ್‌ನಿಂದ ನೀಲಿ ಮತ್ತು ಬಿಳಿ ಬಣ್ಣದ ರೈಲು ತಿರುವನಂತಪುರಕ್ಕೆ ಬಂದು ಸೇರಿದೆ ಆದರೆ ಇದನ್ನು ಕೇಸರಿ ಮತ್ತು ಬಿಳಿ ಬಣ್ಣದ ರೈಲಿನ ಪರ‍್ಯಾಯವಾಗಿ ಸೇವೆಗಾಗಿ ಇಳಿಸಲಾಗುವುದೇ ಎಂಬುವುದನ್ನು ರೈಲ್ವೇ ಇಲಾಖೆ ಈ ತನಕ ಸ್ಪಷ್ಟಪಡಿಸಿಲ್ಲ.

You cannot copy contents of this page