ಮಂಜೇಶ್ವರ: ಧಾರ್ಮಿಕ ಮುಂದಾಳು ಉದ್ಯಾವರ ನಿವಾಸಿ ದಿನೇಶ್.ಡಿ [75] ನಿಧನರಾದರು. ಹಲವು ದಿನಗಳಿಂದ ಅಸೌಖ್ಯದಿಂದ ಬಳಲುತ್ತಿದ್ದ ಇವರು ನಿನ್ನೆ ಬೆಳಿಗ್ಗೆ ದೇರಳಕಟ್ಟೆ ಖಾಸಾಗಿ ಆಸ್ಪತ್ರೆಯಲ್ಲಿ ನಿಧನರಾದರು. ಇವರು ಬೋವಿ ಸಮಾಜದ ಹಿರಿಯರಾಗಿದ್ದು, ಉದ್ಯಾ ವರ ಪಾಡಾಂಗರೆ ಭಗವತೀ ಕ್ಷೇತ್ರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು. ಪಾಡಾಂಗರೆ ಭಗವತೀ ಕ್ಷೇತ್ರ ಮತ್ತು ಪರಿವಾರ ದೈವಗಳ ಗುಡಿಗಳನ್ನು ಜೀರ್ಣೋದ್ದಾರ ಕೈಗೊಳಿಸ¯Ä ಮುಂಚiÁಣೆಯಲ್ಲಿದ್ದರು .
ಮೃತರು ಪತ್ನಿ ಶೀಲಾ, ಮಕ್ಕಳಾದ ಶ್ರೀಕಲಾ, ನಯನ ಕುಮಾರಿ, ಅಳಿಯಂದಿರಾದ ಸಂದೀಪ್ ಉಪ್ಪಳ, ವಿಲಾಸ್.ಎಸ್ ಉಚ್ಚಿಲ್, ಸಹೋದರ, ಸಹೋದರಿಯರಾದ ಬೀರಪ್ಪ, ಹರಿಶ್ವಂದ್ರ, ಮಹೇಶ, ಶೀಲಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಮನೆಗೆ ಕ್ಷೇತ್ರದ ಅಚ್ಚಮಾರು, ಕಾರ್ನವರು, ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ರಾಜೇಶ್ ಉದ್ಯಾವರ, ಬಿಜೆಪಿ ರಾಜ್ಯ ಸಮಿತಿ ಸದಸ್ಯರು, ಅಡ್ವಕೇಟ್ ಎಂ.ನಾರಾ ಯಣ ಭಟ್, ಬಿಜೆಪಿ ರಾಜ್ಯ ಸಮಿತಿ ಸದಸ್ಯರಾದ ಬಾಲಕೃಷ್ಣ ಶೆಟ್ಟಿ.ವಿ, ಕೋ ಳÁರು ಸತೀಶ್ವಂದ್ರ ಭಂಡಾರಿ, ವಿ. ರವೀಂದ್ರನ್, ಹರಿಶ್ವಂದ್ರ ಮಂಜೇಶ್ವರ, ಆದರ್ಶ್.ಬಿ.ಎಂ, ನವೀನ್ ಮಜಾಲು, ಯಾದವ್ ಬಡಾಜೆ, ಲಕ್ಷ÷್ಮಣ ಕುಚ್ಚಿಕ್ಕಾಡು, ಹರೀಶ್ ಶೆಟ್ಟಿ ಮಾಡ ಹಾಗೂ ವಿವಿಧ ಕ್ಷೇತ್ರದ ಮುಂದಾಳು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.
