ಧಾರ್ಮಿಕ ಮುಂದಾಳು ಸದಾನಂದ ವೈದ್ಯರ್ ನಿಧನ

ಉಪ್ಪಳ: ಕೈಕಂಬದಲ್ಲಿ ಜೀವಾಮೃತ ವೈದ್ಯ ಶಾಲೆಯ ವೈದ್ಯ ಕೈಕಂಬ ನಿವಾಸಿ ಸದಾನಂದ ವೈದ್ಯರ್ (೮೩) ಶನಿವಾರ ಸಂಜೆ ಸ್ವಗೃಹದಲ್ಲಿ ನಿಧನರಾದರು. ಸುಮಾರು ಅರ್ಧ ಶತಕಗಳ ಕಾಲ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಇವರು ಸಾಮಾಜಿಕ, ಧಾರ್ಮಿಕ ಮುಂದಾಳು ಆಗಿದ್ದಾರೆ. ಐಲ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ಹಲವಾರು ವರ್ಷಗಳ ಕಾಲ ಮೊಕ್ತೇಸರರಾಗಿ ಸೇವೆ ಸಲ್ಲಿಸಿದ್ದರು. ಲಯನ್ಸ್ ಕ್ಲಬ್ ಉಪ್ಪಳ ಮಂಜೇಶ್ವರ ಇದರ ಸ್ಥಾಪಕ ಸದಸ್ಯ ಮತ್ತು ಮಾಜಿ ಅಧ್ಯಕ್ಷರೂ ಆಗಿದ್ದರು. ಮಕ್ಕಳಾದ ವಾಣಿಶ್ರೀ, ಡಾ| ದೀಪಶ್ರೀ, ಡಾ|ದಿವ್ಯಶ್ರೀ, ಡಾ| ಶ್ರೀರಾಜ್ (ಐಲ ಕ್ಷೇತ್ರದ ಮೊಕ್ತೇಸರ), ಅಳಿಯಂದಿರಾದ ಸುಧೀಶ್ ಕುಮಾರ್, ಡಾ| ಸಂತೋಷ್, ಡಾ.ಸಾನಂದ್, ಸೊಸೆ ಡಾ| ರೇವತಿ, ಸಹೋದರ, ಸಹೋದರಿಯರಾದ ಸುಶೀಲ ಟೀಚರ್, ಡಾ| ಜಯಾನಂದ, ಕಾರ್ತಾ್ಯಯಿನಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಪತ್ನಿ ವಾಸಿನಿ ಈ ಹಿಂದೆ ನಿಧನರಾಗಿದ್ದಾರೆ.

RELATED NEWS

You cannot copy contents of this page