ನಕಲಿ ವೆಬ್‌ಸೈಟ್ ಮೂಲಕ ೧.೨೫ ಕೋಟಿ ರೂಪಾಯಿ ಲಪಟಾವಣೆ: ಯುವಕ ಸೆರೆ

ಕಾಸರಗೋಡು: ನಕಲಿ ಶೇರ್ ಟೈಡಿಂಗ್ ವೆಬ್‌ಸೈಟ್ ನಿರ್ಮಿಸಿ ಆ ಮೂಲಕ ಯುವಕನೋರ್ವನಿಂದ ೧.೨೫ ಕೋಟಿ ರೂ. ಲಪಟಾಯಿಸಿದ  ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಚೆಮ್ನಾಡ್ ಪೆರುಂಬಳ ಅಂಗನವಾಡಿಗೆ ಸಮೀಪದ ಇಡಯ್ಕಲ್ ಟಿ. ರಾಶೀದ್ (೨೯) ಬಂಧಿತನಾದ ಆರೋಪಿ. ಕೋಟ್ಟಯಂ ಈಸ್ಟ್ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಕೋಟ್ಟಯಂ ಕುಂಞಕುಳಿ ನಿವಾಸಿಯೋರ್ವ ನೀಡಿದ ದೂರಿನ ವಿರುದ್ಧ ಪೊಲೀಸರು ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದರು.

ನಕಲಿ ಟ್ರೈಡಿಂಗ್ ವೆಬ್‌ಸೈಟ್ ಮೂಲಕ ಅದನ್ನು ಟ್ರೈಡಿಂಗ್ ಬಿಸಿನೆಸ್‌ನಲ್ಲಿ ಆಸಕ್ತಿ ಹೊಂದಿರುವವರು ಸಂಪರ್ಕಿಸಿ ಎಂಬ ಸಂದೇಶ ನೀಡಿ ನಕಲಿ ಫೇಸ್ ಬುಕ್ ಐ.ಡಿ ಮೂಲಕ ನನ್ನನ್ನು ಸಂಪರ್ಕಿಸಿ ಆರೋಪಿ ತನ್ನಿಂದ ಹಲವು ಬಾರಿಯಾಗಿ ೧,೨೪,೧೯,೧೫೦ ರೂ. ಪಡೆದು ವಂಚಿಸಿರುವುದಾಗಿ ವಂಚನೆಗೊಳಗಾದ ಯುವಕ ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ಆರೋಪಿಸಿದ್ದಾನೆ.

RELATED NEWS

You cannot copy contents of this page