ನಟ ಶಿವನ್ ಮೂನಾರ್ ನಿಧನ

ಮೂನಾರ್: ಅದ್ಭುತ ದ್ವೀಪ್ ಎಂಬ ಸಿನಿಮಾದಲ್ಲಿ ನಟಿಸಿದ ಶಿವನ್ ಮೂನಾರ್ (45) ನಿಧನ ಹೊಂದಿ ದರು.  ಈ ಸಿನಿಮಾವನ್ನು ವಿನಯನ್ ನಿರ್ದೇಶಿಸಿದ್ದರು. ಅದ್ಭುತ ದ್ವೀಪ್ ಮಾತ್ರವಲ್ಲದೆ ಹಲವಾರು ಮಲೆಯಾಳ, ತಮಿಳು ಸಿನಿಮಾಗಳಲ್ಲೂ ನಟಿಸಿದ್ದಾರೆ. ಕುಳ್ಳ ಶರೀರ ಪ್ರಕೃತಿಯ ಇವರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಉದ್ಘೋಷಕರಾಗಿಯೂ ಕೆಲಸ ನಿರ್ವಹಿಸಿದ್ದರು. ಸ್ಟೇಜ್ ಶೋಗಳ ಮೂಲಕ ಶಿವನ್ ಮೂನಾರ್ ಕಲಾರಂಗಕ್ಕೆ ತಲುಪಿದ್ದರು. ತಮಿಳಿನ ಖ್ಯಾತ ನಟ ವಿಜಯ್ ಜೊತೆಯೂ ಅಭಿನಯಿಸಿದ್ದರು. ಹಾಸ್ಯರಂಗಗಳಲ್ಲಿ ಮಿಂಚಿದ ಇವರು ಪತ್ನಿ ರಾಜಿ, ಮಕ್ಕಳಾದ ಸೂರ್ಯದೇವ್, ಸೂರ್ಯಕೃಷ್ಣ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page