ನಟ ಸಲ್ಮಾನ್‌ಖಾನ್‌ಗೆ ಮತ್ತೆ ಜೀವ ಬೆದರಿಕೆ

ಮುಂಬೈ: ಬಾಲಿವುಡ್ ನಟ ಸನ್ಮಾನ್ ಖಾನ್‌ಗೆ ಮತ್ತ್ತೆ ಜೀವಬೆದರಿಕೆ ಉಂಟಾಗಿದೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯನೆಂದು ಹೇಳಲಾದ ವ್ಯಕ್ತಿ ಮುಂಬೈ ಟ್ರಾಫಿಕ್ ಪೊಲೀಸರಿಗೆ  ಬೆದರಿಕೆ ಸಂದೇಶ ಕಳುಹಿಸಿದ್ದಾನೆ. ಗ್ಯಾಂಗ್‌ಸ್ಟರ್ ನೊಂದಿಗೆ  ದೀರ್ಘಕಾಲದ ಜಗಳ ವನ್ನು ಬಗೆಹರಿಸಲು ನಟ ಸಲ್ಮಾನ್ ಖಾನ್‌ರಿಂದ ಐದು ಕೋಟಿ ರೂ.ಗಳ  ಬೇಡಿಕೆ ಮುಂದಿರಿಸಿದ್ದಾನೆ. ಹಣ ನೀಡಲು ವಿಫಲವಾದರೆ ಅವರಿಗೆ ಇತ್ತೀಚೆಗೆ ಗುಂಡಿಕ್ಕಿ ಕೊಲ್ಲಲ್ಪಟ್ಟ ಮಾಜಿ ಸಚಿವ ಎನ್‌ಸಿಪಿ ನಾಯಕ ಬಾಬ  ಸಿದ್ದಿಕಿ ಅವರ ಗತಿಯೇ ಉಂಟಾಗಲಿದೆಯೆಂದು ಬೆದರಿಕೆ ಸಂದೇಶದಲ್ಲಿ ಎಚ್ಚರಿಕೆ ನೀಡಲಾಗಿದೆ. ಈ ಬಗ್ಗೆ  ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮಾತ್ರವಲ್ಲ ಸಲ್ಮಾನ್ ಖಾನ್‌ಗೆ ಬಿಗಿ ಭದ್ರತೆ ಯನ್ನು ಏರ್ಪಡಿಸಿದ್ದಾರೆ. ಸಲ್ಮಾನ್ ಖಾನ್‌ರ ಮನೆಗೆ ದುಷ್ಕರ್ಮಿಗಳು ಇತ್ತೀಚೆಗಷ್ಟೇ ಗುಂಡಿನ ಮಳೆ ಸುರಿದಿದ್ದರು. ಅದರ ಬೆನ್ನಲ್ಲೇ ಅವರಿಗೆ ಈ ಹೊಸ ಬೆದರಿಕೆ ಬಂದಿದೆ.

You cannot copy contents of this page