ನರಿಕೋಡ್ ಉಸ್ತಾದ್ ವಾರ್ಷಿಕ ರಮಸಾನ್ 21ರಿಂದ

ನರಿಕೋಡ್ ಉಸ್ತಾದ್ ವಾರ್ಷಿಕ ರಮಸಾನ್ 21ರಿಂದ

ಕಣ್ಣೂರು: ಶೈಖುನಾ ನರಿಕೋಡ್ ಉಸ್ತಾದ್‌ರ ೧೩ನೇ ವಾರ್ಷಿಕ ಈ ತಿಂಗಳ ೨೧, ೨೨ರಂದು ನರಿಕೋಡ್ ರಿಫಾಯಿ ಮಸೀದಿಯಲ್ಲಿ ನಡೆಯಲಿದೆ.

೨೧ರಂದು ಬೆಳಿಗ್ಗೆ ೯ರಿಂದ ಮೌಲೂದ್, ಸಿಯಾರತ್ ನಡೆಯಲಿದೆ. ಆಟ್ಟಕೋಯ ಕಪ್ಪಾಲಂ, ಮುಹಮ್ಮದ್ ಹುಸೈನ್ ಅಲ್ ಹೈದ್ರೋಸಿ ಕಪ್ಪಾಲಂ ಸಿಯಾರತ್‌ಗೆ ನೇತೃತ್ವ ನೀಡುವರು. ಜಿಲಾಲಿಯಾ ಅಧ್ಯಕ್ಷ ಅಹ್‌ಮದ್ ಜಿಲಾಲುದ್ದೀನ್ ವಳಪಟ್ಟಣಂ ಧ್ವಜಾರೋಹಣ ಗೈಯ್ಯುವರು. ಬಳಿಕ ವಿವಿಧ ಕಾರ್ಯಕ್ರಮ ನಡೆಯಲಿದ್ದು, ಹಲವು ಗಣ್ಯರು ಭಾಗವಹಿಸುವರು.

೨೨ರಂದು ಮಧ್ಯಾಹ್ನ ೧.೪೫ಕ್ಕೆ  ಖತ್ಮುಲ್ ಖುರ್‌ಆನ್ ಮಜಲೀಸ್‌ಗೆ ಹುಸೈನ್ ಬಅಬೂದ್ ಪಾನೂರು ನೇತೃತ್ವ ನೀಡುವರು. ೨.೧೫ಕ್ಕೆ ಜಲಾಲಿಯ ರಾತೀಬ್ ನಡೆಯಲಿದ್ದು, ಅಲಿ ಬಾಫಖಿ ಪ್ರಾರ್ಥನೆ ನಡೆಸುವರು. ಮುಹಮ್ಮದ್ ಮುಸ್ಲಿಯಾರ್ ಮಂಜೇಶ್ವರ ರಾತೀಬ್‌ಗೆ ನೇತೃತ್ವ ನೀಡುವರು. ಸಂಜೆ ೪ಕ್ಕೆ ಸಮಾರೋಪ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ.

RELATED NEWS

You cannot copy contents of this page