ನವಜಾತ ಶಿಶು ಶಾಲಾ ವರಾಂಡದಲ್ಲಿ ಪತ್ತೆ: ಉಪೇಕ್ಷಿಸಿದವರಿಗಾಗಿ ಶೋಧ

ಅಡೂರು: ಒಂದು ದಿನ ಪ್ರಾಯದ ನವಜಾತ ಶಿಶುವನ್ನು ಶಾಲಾ ವರಾಂಡದಲ್ಲಿ ಉಪೇಕ್ಷಿಸಿದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಆದೂರು ಪೊಲೀಸ್ ಠಾಣೆಯ ವ್ಯಾಪ್ತಿಯ ದೇಲಂಪಾಡಿ ಪಂಜಿಕ್ಕಲ್ ಶ್ರೀಕೃಷ್ಣಮೂರ್ತಿ ಎಯುಪಿ ಶಾಲೆಯ ವರಾಂಡದಲ್ಲಿ ಹೆಣ್ಣು ಮಗು ಪತ್ತೆಯಾಗಿದೆ. ನಿನ್ನೆ ಮಧ್ಯಾಹ್ನ ಶಾಲಾ ವರಾಂಡದಿಂದ ಮಗುವಿನ ಕೂಗು ಕೇಳಿ ಸ್ಥಳೀ ಯರು ತಲುಪಿದ್ದಾರೆ. ಅವರು ನೀಡಿದ ಮಾಹಿತಿ ಯಂತೆ ಆದೂರು ಪೊಲೀಸರು ಸ್ಥಳಕ್ಕೆ ತಲುಪಿದ್ದು, ಮಗುವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಿದ್ದಾರೆ. ಮಗುವನ್ನು ಉಪೇಕ್ಷಿಸಿದವರ ಪತ್ತೆಗಾಗಿ ತನಿಖೆ ಆರಂಭಿಸಲಾಗಿದೆ.

RELATED NEWS

You cannot copy contents of this page