ನವೀಕರಿಸಿದ ಶೌಚಾಲಯ ತೆರೆಯಲು ಕ್ರಮವಿಲ್ಲ: ಉಪ್ಪಳದಲ್ಲಿ ಸಮಸ್ಯೆ
ಉಪ್ಪಳ: ಉಪ್ಪಳ ಬಸ್ ನಿಲ್ದಾಣದಲ್ಲಿ ಶೋಚನೀಯ ಸ್ಥಿತಿಯಲ್ಲಿದ್ದ ಶೌಚಾಲಯಗಳನ್ನು ನವೀಕರಿಸಲಾಗಿದ್ದು, ಆದರೆ ಇದನ್ನು ಸಾರ್ವಜನಿಕರ ಉಪಯೋಗಕ್ಕೆ ಬಿಟ್ಟು ಕೊಡದಿರುವುದು ಸಮಸ್ಯೆಗೆ ಕಾರಣ ವಾಗಿದೆ. ಶೌಚಾಲಯದ ಪೈಪ್, ಟೈಲ್ಸ್, ವಿದ್ಯುತ್, ಪೈಂಟಿಂಗ್ ಸಹಿತ ಸುಮಾರು ೩ ಲಕ್ಷ ರೂ.ನಲ್ಲಿ ನವೀಕರಿಸಲಾಗಿದೆ. ಪಂಚಾಯತ್ ಹಾಗೂ ಶುಚಿತ್ವ ಮಿಶನ್‌ನ ಫಂಡ್‌ನಿಂದ ಇದಕ್ಕೆ ವೆಚ್ಚ ಮಾಡಲಾಗಿದ್ದು, ವಾರ್ಡ್ ಪ್ರತಿನಿಧಿ ಶರೀಫ್ ನೇತೃತ್ವ ನೀಡಿದ್ದರು. ಶೌಚಾಲಯಕ್ಕೆ ನೀರಿನ ವ್ಯವಸ್ಥೆಯ ಪೈಪ್ ಅಳವಡಿಸಲು ಬಾಕಿಯಿದ್ದು, ಈ ಕೆಲಸ ಶೀಘ್ರವೇ ಪೂರ್ತಿಗೊಳಿಸಿ ಸಾರ್ವಜನಿಕರಿಗೆ ತೆರೆದು ಕೊಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಉಪ್ಪಳಕ್ಕೆ ತಲುಪುವ ಮಂದಿಗೆ ಹಾಗೂ ವ್ಯಾಪಾರಿಗಳಿಗೆ ಬೇರೆ ಶೌಚಾಲಯ ಇಲ್ಲದ ಕಾರಣ ಪ್ರಾಥಮಿಕ ಅಗತ್ಯ ನಿರ್ವಹಿಸಲು ಸಮಸ್ಯೆಯಾಗುತ್ತಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.