ನಾಗರಿಕರ ಪ್ರತಿಭಟನೆಗೆ ಜಯ: ಕುಂಬಳೆ ಭಾಸ್ಕರನಗರದಲ್ಲಿ ಬಸ್ ತಂಗುದಾಣ ನಿರ್ಮಾಣಕ್ಕೆ ಚಾಲನೆ

ಕುಂಬಳೆ: ಇಲ್ಲಿನ ಭಾಸ್ಕರನಗ ರದಲ್ಲಿ ಬಸ್ ಪ್ರಯಾಣಿಕರಿಗಾಗಿ ತಂಗುದಾಣ ನಿರ್ಮಿಸಬೇಕೆಂಬ ನಾಗರಿಕರ ಪ್ರತಿಭಟ ನೆಗೆ ಕೊನೆಗೂ ಜಯ ಲಭಿಸಿದೆ.

ಇಲ್ಲಿಯ ಬಸ್ ತಂಗುದಾಣ ನಿರ್ಮಾಣಕ್ಕೆ ಕೆಎಸ್‌ಟಿಪಿ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಇದರಂತೆ  ಕಾಮಗಾರಿಗೆ  ನಿನ್ನೆಯಿಂದ ಚಾಲನೆ ನೀಡಲಾಗಿದೆ. ಸೀತಾಂಗೋಳಿ ಯಿಂದ ಕುಂಬಳೆ  ಭಾಗಕ್ಕೆ ತೆರಳುವ ರಸ್ತೆ ಬದಿ ಜೆಸಿಬಿ ಬಳಸಿ ಅಗೆದು ಸಮತಟ್ಟುಗೊಳಿ ಸುವ ಕೆಲಸ ಆರಂಭಗೊಂಡಿದೆ.  ಇನ್ನು ಕೆಲವೇ ದಿನಗಳೊಳಗೆ ಇಲ್ಲಿ ತಂಗುದಾಣ ನಿರ್ಮಾಣಗೊಳ್ಳಲಿ ದೆಯೆಂಬ ನಿರೀಕ್ಷೆ ಇಲ್ಲಿನ ನಾಗರಿಕರದಾ ಗಿದೆ.ಕುಂಬಳೆ-ಮುಳ್ಳೇರಿಯ  ಕೆಎಸ್‌ಟಿಪಿ ರಸ್ತೆ  ನಿರ್ಮಾ ಣಗೊಂಡ ಬಳಿಕ ಹಲವು  ತಂಗುದಾಣ ಗಳನ್ನು  ನಿರ್ಮಿಸಲಾಗಿದೆ. ರಸ್ತೆ ನಿರ್ಮಾ ಣದ ಅಂಗವಾಗಿ ಈ ಮೊದಲು ಭಾಸ್ಕ ರನಗರದಲ್ಲಿದ್ದ ತಂಗುದಾಣದ ಅರ್ಧ ಭಾಗವನ್ನು ಮುರಿದು ತೆಗೆಯಲಾಗಿದೆ. ಆದರೆ ಅದರ ಬದಲಿಗೆ ಇಲ್ಲಿ ಮಾತ್ರ ತಂಗುದಾಣ  ನಿರ್ಮಿಸಲು ಅಧಿಕಾರಿಗಳು ಕ್ರಮ ಕೈಗೊಂಡಿರಲಿಲ್ಲ. ಇದನ್ನು ಪ್ರತಿಭಟಿಸಿ ನಾಗರಿಕರು ರಂಗಕ್ಕಿಳಿದಿದ್ದರು. ಇದೇ ವೇಳೆ ಈ ಮೊದಲು ಇದ್ದ ತಂಗುದಾಣಕ್ಕೆ ಇತ್ತೀಚೆಗೆ   ಕಾರೊಂದು ಢಿಕ್ಕಿ ಹೊಡೆದಿದ್ದು, ಇದರಿಂದ ಇದು ಮತ್ತಷ್ಟು ಹಾನಿಗೀಡಾಗಿದೆ.

RELATED NEWS

You cannot copy contents of this page