ನಾಡಿನಾದ್ಯಂತ ಗಣೇಶೋತ್ಸವ ಸಂಭ್ರಮ

ಕಾಸರಗೋಡು: ವಿದ್ಯಾ ಬುದ್ಧಿ ಸಿದ್ಧಿದಾಯಕ ಪ್ರಥಮ ವಂದ್ಯಾ ಸಿದ್ದಿವಿನಾಯಕನ ಜನ್ಮದಿನವಾದ ಗಣೇಶ ಚತುರ್ಥಿ ಹಬ್ಬಕ್ಕೆ ಅಬ್ಬರದ ಮಳೆಯ ನಡುವೆಯೂ ವೈಭವದ ಕಳೆ ಕಂಡು ಬರುತ್ತಿದೆ. ವಿಘ್ನ ನಿವಾರಕನಾದ ವಿಘ್ನೇಶ್ವರನ ಉತ್ಸವಾಚರಣೆಯ ಸಂಭ್ರಮಕ್ಕೆ ತೊಡಕೆಂದೂ ಉಂಟಾಗಲ್ಲ ಎಂಬ ಭಕ್ತರ ಮನೋಭಿಲಾಷೆಗೆ ಸೋನೆ ಮಳೆಯು ಹೂಮಳೆಯಾಗಿ ಪರಿಣಮಿಸಿದೆ.

ನಾಡಿನ ಪ್ರಸಿದ್ಧ ಗಣಪತಿ ದೇವಾಲಯಗಳಾದ ಮಧೂರು, ಶರವು, ಸೌತಡ್ಕ,  ಹಟ್ಟಿಯಂಗಡಿ, ಇಡಗುಂಜಿ, ಕುಂಭಾಶಿ, ಗೋಕರ್ಣ ಮೊದಲಾದ ದೇವಸ್ಥಾನಗಳಲ್ಲದೆ ಸ್ಥಳೀಯ ಹೆಚ್ಚಿನ ದೇವಸ್ಥಾನಗಳಿಗೆ ಭಕ್ತರು ಭೇಟಿ ನೀಡಿ ಸೇವೆ ಸಲ್ಲಿಸಿ ಸಂತೃಪ್ತಿ ಪಡೆದುಕೊಳ್ಳುತ್ತಿದ್ದಾರೆ. ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲ ನೀಡುವ ಹಿನ್ನೆಲೆಯಲ್ಲಿ ಆರಂಭಗೊಂಡ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣೆಯು ನಾಡಿನ ಅಲ್ಲಲ್ಲಿ ವಿಜೃಂಭಣೆಯಿಂದ ಆಚರಿಸುವ ಮೂಲಕ ಸ್ವದೇಶಿ ಜಾಗರಣೆ, ಧಾರ್ಮಿಕ ಸಹಭಾವನೆ, ಸಾಂಸ್ಕೃತಿಕ, ಕ್ರೀಡಾ ಮನೋಭಾವನೆಗೆ ಪ್ರೋತ್ಸಾಹ ನೀಡುತ್ತಿರುವುದು ವ್ಯಕ್ತವಾಗುತ್ತಿದೆ.

ಕಾಸರಗೋಡು ನಗರ, ಬದಿಯಡ್ಕ, ಕುಂಬಳೆ, ಮುಳ್ಳೇರಿಯ, ಪೆರ್ಲ,  ಉಪ್ಪಳ (ಮುಳಿಂಜ), ಜೋಡುಕಲ್ಲು, ಸೋಂಕಾಲು, ಮಂಜೇಶ್ವರ (ಹೊಸಂಗಡಿ), ದೈಗೋಳಿ (ವರ್ಕಾಡಿ), ಸೀತಾಂಗೋಳಿ, ಕುಂಟಾರು, ಮಣಿಯೂರು, ಮದಂಗಲ್ಲು ಕಟ್ಟೆ, ಬಾವಳಿಗುಳಿ, ಬೆಳ್ಳೂರು ಸಹಿತ ನಾಡಿನ ಹಲವೆಡೆ ಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಿಸುವ ಮೂಲಕ ಸಮಾಜದ ಜನರನ್ನು ಒಗ್ಗೂಡಿಸುವ ಕಾರ್ಯ ನಡೆಯು ತ್ತಿದೆ. ಕಾಸರಗೋಡು ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಸಾರ್ವಜನಿಕ ಗಣೇಶೋ ತ್ಸವಕ್ಕೆ ಈ ಬಾರಿ 70ನೇ ವರ್ಷವಾಗಿದ್ದು, ಈ ಸಲ 10 ದಿನಗಳ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

RELATED NEWS

You cannot copy contents of this page