ನಾಪತ್ತೆಯಾದ ವಿದ್ಯಾರ್ಥಿನಿ: ಪ್ರಿಯತಮನ ವಿವಾಹ ಇಂದು ಠಾಣೆಗೆ ಹಾಜರಾಗುವುದಾಗಿ ಸಂದೇಶ

ಮುಳ್ಳೇರಿಯ: ಎರಡು ದಿನದ ಹಿಂದೆ ನಾಪತ್ತೆಯಾಗಿದ್ದ ಯುವತಿ ಪ್ರಿಯತಮನನ್ನು ವಿವಾಹವಾಗಿ ಪತ್ತೆಯಾಗಿದ್ದಾಳೆ. ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಬೆಳ್ಳೂರು ಬೀಜದಕಟ್ಟೆದ ಶ್ರೀದೇವಿ (20) ಪೆರ್ಲ ನಿವಾಸಿ ಕೀರ್ತನ್ (22)ನನ್ನು ವಿವಾಹವಾಗಿದ್ದಾಳೆ. ಪೆರ್ಲದ ಖಾಸಗಿ ಕಾಲೇಜು ವಿದ್ಯಾರ್ಥಿನಿಯಾದ ಶ್ರೀದೇವಿ, ಆಟೋಚಾಲಕನಾದ ಕೀರ್ತನ್‌ನನ್ನು ಪ್ರೀತಿಸಲು ಆರಂಭಿಸಿದ್ದಳು. ಬುಧವಾರ ಶ್ರೀದೇವಿ ನಾಪತ್ತೆಯಾಗಿದ್ದಳು. ಈ ಬಗ್ಗೆ ತಂದೆ ರಾಧಾಕೃಷ್ಣ ನಾಯ್ಕ್ ಆದೂರು ಪೊಲೀಸರಿಗೆ ದೂರು ನೀಡಿದ್ದು, ಕೇಸು ದಾಖಲಿಸಲಾಗಿತ್ತು. ಬಳಿಕ ಹುಡುಕಾಟ ಮಧ್ಯೆ ಕೀರ್ತನ್ ಆದೂರು ಠಾಣೆಗೆ ದೂರವಾಣಿ ಕರೆ ಮಾಡಿ ಶ್ರೀದೇವಿ ನನ್ನ ಜೊತೆಗಿದ್ದಾಳೆ, ಆಕೆಯನ್ನು ಸುಳ್ಯದ ಕ್ಷೇತ್ರವೊಂದರಲ್ಲಿ ವಿವಾಹವಾಗಿರುವುದಾಗಿಯೂ ತಿಳಿಸಿದ್ದನು. ಇಂದು ಠಾಣೆಗೆ ಹಾಜರಾಗುವುದಾಗಿ ಕೀರ್ತನ್ ತಿಳಿಸಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page