ನಾಪತ್ತೆಯಾದ ವ್ಯಕ್ತಿಯ ಶೋಧ ವೇಳೆ ಇನ್ನೋರ್ವ ಯುವಕನ ಮೃತದೇಹ ಪತ್ತೆ

ಕಾಸರಗೋಡು: ನಾಪತ್ತೆಯಾದ ಪಿಗ್ಮಿ ಕಲೆಕ್ಷನ್ ಏಜೆಂಟ್ ರಮೇ ಶನ್ ರನ್ನು ಹೊಳೆಯಲ್ಲಿ ಶೋಧ ನಡೆಸುತ್ತಿದ್ದ ವೇಳೆ ಐದು ದಿನಗಳ ಹಿಂದೆ ನಾಪತ್ತೆಯಾಗಿದ್ದ  ಬೇರೊಬ್ಬ ಯುವಕನ  ಮೃತದೇಹ ಚಂದ್ರಗಿರಿ ಹೊಳೆಯಲ್ಲಿ ಪತ್ತೆಯಾಗಿದೆ.

ಕೂಡ್ಲು ಚೌಕಿ ಪಾಯಿಚ್ಚಾಲ್ ಸಾರಾ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿರುವ ರಮೇಶ್-ಲೀಲಾ ದಂಪತಿಯ ಪುತ್ರ ವಿನಯ (27) ಎಂಬಾತನ ಮೃತದೇಹ ಚಂದ್ರಗಿರಿ ಹೊಳೆಯಲ್ಲಿ  ನಿನ್ನೆ ಪತ್ತೆಯಾಗಿದೆ.

ಕಲ್ಲಕಟ್ಟೆಗೆ ಸಮೀಪದ ಪಾಂಬಾಚಿಕಡವು ಬನ್ನಡ್ಕ ಹೌಸ್  ನಿವಾಸಿ ಹಾಗೂ ಪಿಗ್ಮಿ ಕಲೆಕ್ಷನ್ ಏಜೆಂಟ್ ರಮೇಶನ್ ಬಿ.ಎ (5೦) ಎಂಬವರು ಮೊನ್ನೆ ನಾಪತ್ತೆಯಾ ಗಿದ್ದರು. ಅವರ  ಸ್ಕೂಟರ್ ಚಂದ್ರಗಿರಿ ಸೇತುವೆ ಬಳಿ ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅದರಿಂದ ಉಂಟಾದ ಶಂಕೆಯಿಂದಾಗಿ ಕಾಸರಗೋಡು ಅಗ್ನಿಶಾಮಕದಳ ನಿನ್ನೆ ಚಂದ್ರಗಿರಿ ಹೊಳೆಯಲ್ಲಿ ವ್ಯಾಪಕ ಶೋಧ ಆರಂಭಿಸಿದ್ದರು. ಆ ವೇಳೆ ಅಗ್ನಿಶಾಮ ಕದಳ ವಿನಯನ ಮೃತದೇಹ ಹೊಳೆಯಲ್ಲಿ   ಪತ್ತೆಹಚ್ಚಿ  ಜನರಲ್ ಆಸ್ಪತ್ರೆಗೆ ಸಾಗಿಸಿದ್ದಾರೆ.

ಅಗೋಸ್ತ್ 10ರಂದು ವಿನಯ ನಾಪತ್ತೆಯಾಗಿದ್ದರು. ಆ ಬಗ್ಗೆ ಸಂಬಂ ಧಿಕರು ಕಾಸರಗೋಡು ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ಮಿಸ್ಸಿಂಗ್ ಪ್ರಕರಣ  ದಾಖಲಿಸಿ ಶೋಧ ಆರಂಭಿಸಿದ್ದರು. 

ಮೃತರು ಸಹೋದರ ವಿನೋದ್, ಸಹೋದರಿ ಸೌಮ್ಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page