ಕುಂಬಳೆ: ಕುಂಬಳೆ ಕೊಯ್ಪಾಡಿ ನಾರಾಯಣಮಂಗಲದಲ್ಲಿ ಯುವಕನಿಗೆ ಇರಿದ ಘಟನೆ ನಡೆದಿದೆ. ಗಂಭೀರ ಗಾಯಗೊಂಡ ವಿ.ವಿ. ಮಧು (46)ರನ್ನು ಕುಂಬಳೆ ಸಹಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಘಟನೆಯಲ್ಲಿ ಸಹೋದರಿಯ ಪತಿ ನಾರಾಯಣ ಮಂಗಲ ನಿವಾಸಿ ಮೋಹನ್‌ನನ್ನು ಕುಂಬಳೆ ಪೊಲೀಸ್ ಇನ್ಸ್‌ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್ ಬಂಧಿಸಿದ್ದಾರೆ. ಮಧ್ಯದಮಲಿನಲ್ಲಿ ಸಹೋದರಿಗೆ ಹಲ್ಲೆ ನಡೆಸುತ್ತಿದ್ದಾಗ ಅದನ್ನು ಪ್ರಶ್ನಿಸಿದ ದ್ವೇಷದಿಂದ ಇರಿದಿರುವುದಾಗಿ ಕುಂಬಳೆ ಪೊಲೀಸರು ದಾಖಲಿಸಿದ ಪ್ರಕರಣದಲ್ಲಿ ತಿಳಿಸಲಾಗಿದೆ.
