ನಾಲಂದ ಕಾಲೇಜಿನಲ್ಲಿ ವಿಶ್ವ ಪ್ರಕೃತಿ ಸಂರಕ್ಷಣಾ ದಿನಾಚರಣೆ

ಪೆರ್ಲ: ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕ ಸಂಖ್ಯೆ-49 ಹಾಗೂ ಭೂಮಿತ್ರಸೇನ ಕ್ಲಬ್ ಜಂಟಿ ಆಶ್ರಯ ದಲ್ಲಿ ವಿಶ್ವ ಪ್ರಕೃತಿ ಸಂರಕ್ಷಣಾ ದಿನ ಆಚರಿಸಲಾಯಿತು.
ಎನ್ನೆಸ್ಸೆಸ್ ಯೋಜನಾಧಿಕಾರಿ ರೆಜೀಶ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾನವನು ತನ್ನ ಸ್ವಾರ್ಥ ಸಾಧನೆಗಾಗಿ ಪ್ರಕೃತಿ ಹಾಗೂ ನೈಸರ್ಗಿಕ ಸಂಪನ್ಮೂಲಗಳನ್ನು ನಾಶ ಪಡಿಸುತ್ತಿದ್ದಾನೆ. ಪ್ರಾಕೃತಿಕ ಸಂಪನ್ಮೂಲಗಳನ್ನು ಉಳಿಸುವತ್ತ ಗಮನ ಹರಿಸದಿದ್ದರೆ ಪ್ರಾಕೃತಿಕ ಸಮತೋಲನ ಹಳಿ ತಪ್ಪಿ ಮುಂದಿನ ಪೀಳಿಗೆ ಸಂಕಷ್ಟಕ್ಕೀಡಾಗುವುದು. ಈ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಜುಲೈ 28 ರಂದು ವಿಶ್ವ ಪ್ರಕೃತಿ ಸಂರಕ್ಷಣಾ ದಿನ ಆಚರಿಸಲಾಗುತ್ತದೆ ಎಂದರು.
ಕಾಲೇಜು ಭೂಮಿತ್ರ ಸೇನೆ ಸಂಯೋಜಕ ಮನೋಜ್ ಕುಮಾರ್ ಪಿ. ಮಾತನಾಡಿದರು. ವಾಣಿಜ್ಯ ವಿಭಾಗದ ಪ್ರಾಧ್ಯಾಪಿಕೆ ಭವ್ಯ ಬಿ.ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿ ಸಿದರು. ಎನ್ನೆಸ್ಸೆಸ್ ಸ್ವಯಂ ಸೇವಕರು ಪ್ರಕೃತಿ ಸಂರಕ್ಷಣಾ ಪ್ರತಿಜ್ಞೆ ಸ್ವೀಕರಿಸಿದರು. ಸ್ವಯಂ ಸೇವಕಿ ಅರ್ಚನ ಸ್ವಾಗತಿಸಿ, ಹರ್ಷಿತಾ ವಂದಿಸಿದರು. ಗಣೇಶಕೃಷ್ಣ ನಿರೂಪಿಸಿದರು.

RELATED NEWS

You cannot copy contents of this page