ನಿಗೂಢ ರೀತಿಯಲ್ಲಿ ತಾಯಿ, ಮಗು ನಾಪತ್ತೆ

ಮೀಯಪದವು: ಇಲ್ಲಿನ ಮೂಡಂಬೈಲುನಲ್ಲಿ ವಾಸಿಸಿ ರಬ್ಬರ್ ಟ್ಯಾಪಿಂಗ್ ಕೆಲಸ ನಡೆಸುತ್ತಿದ್ದ ಕುಟುಂಬದ ಮಹಿಳೆ ಹಾಗೂ ಮಗು ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಮೂಲತಃ ವೆಳ್ಳರಿಕುಂಡ್ ಕನಕಪಳ್ಳಿ ಪರಪ್ಪ ನಿವಾಸಿ ಸಿಂಡೋ ಥೋಮಸ್‌ರ ಪತ್ನಿ ಜ್ಯೋತಿ (30), 9 ತಿಂಗಳ ಮಗು ಅನ್ಮರಿಯ ನಾಪತ್ತೆಯಾಗಿರುವುದಾಗಿ ಪತಿ ಮಂಜೇಶ್ವರ ಠಾಣೆಗೆ ದೂರು ನೀಡಿದ್ದಾರೆ. ಈ ತಿಂಗಳ ೨೪ರಂದು ಸಿಂಡೋ ಥೋಮಸ್ ಊರಿಗೆ ತೆರಳಿ ಸಂಜೆ ಹಿಂತಿರುಗುವ ವೇಳೆ ಮನೆಯಲ್ಲಿ ಪತ್ನಿ ಹಾಗೂ ಮಗು ಇರಲಿಲ್ಲವೆಂದು ದೂರಿನಲ್ಲಿ ತಿಳಿಸಲಾಗಿದ್ದು, ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

You cannot copy content of this page