ನಿದ್ದೆಯಲ್ಲಿ ಯುವಕ ಮೃತ್ಯು

ಕಾಸರಗೋಡು: ನಿದ್ದೆಯಲ್ಲಿ ಗಲ್ಫ್ ಉದ್ಯೋಗಿಯಾದ ಯುವಕ ಸಾವನ್ನಪ್ಪಿದ ಘಟನೆ ತಳಂಗರೆಯಲ್ಲಿ ನಡೆದಿದೆ.

ತಳಂಗರೆ ಬಿಲಾಲ್‌ನಗರದ ಇಬ್ರಾಹಿಂ -ಆಯಿಷಾ ದಂಪತಿ ಪುತ್ರ ಮೊಹಮ್ಮದ್ ಸಾದಿಕ್ (29) ಸಾವನ್ನಪ್ಪಿದ ಯುವಕ.  ಇವರು ನಾಳೆ ಗಲ್ಫ್‌ಗೆ ತೆರಳುವ ಸಿದ್ಧತೆಯಲ್ಲಿದ್ದರು. ಈ ಮಧ್ಯೆ ಅವರು ನಿನ್ನೆ ಬೆಳಿಗ್ಗೆ ಆಹಾರ ಸೇವಿಸಿ ತಮ್ಮ ಕೊಠಡಿಯೊಳಗೆ ನಿದ್ರಿಸಿದ್ದರು. ತಡವಾದರೂ ಅವರು ಹೊರ ಬಾರದಿರುವುದನ್ನು ಗಮನಿಸಿದ ಮನೆಯವರು ಹೋಗಿ ನೋಡಿದಾಗ ಸಾದಿಕ್ ಗಂಭೀರ ಅವಸ್ಥೆಯಲ್ಲಿರುವುದನ್ನು ಕಂಡು ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಮೃತರು ಹೆತ್ತವರ ಹೊರತಾಗಿ ಸಹೋದರರಾದ ಸಕೀರ್, ಸಮೀರ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page