ನಿದ್ರಿಸುತ್ತಿದ್ದ ಪುತ್ರನನ್ನು ಕಡಿದು ಕೊಲೆಗೈದ ತಂದೆ

ಕಲ್ಲಿಕೋಟೆ: ನಿದ್ರೆಯಲ್ಲಿದ್ದ ಪುತ್ರನನ್ನು ತಂದೆಯೋರ್ವ ಕಡಿದು ಕೊಲೆಗೈದ ಭೀಕರ ಕೃತ್ಯ ಕಲ್ಲಿಕೋಟೆಯ ಕೂಡರತ್ತಿ ಪಂಚಾಯ ತ್‌ನಲ್ಲಿ ನಡೆದಿದೆ.  ಚೆರಿಯಪುರ ಎಂಬಲ್ಲಿನ  ಬಿಜು ಎಂಬಾ ತ  ಪುತ್ರ ಕೃಸ್ಟಿ ಜೇಕಬ್ (24)ನನ್ನು  ಕಡಿದು ಕೊಲೆಗೈದಿದ್ದಾನೆ. ಇಂದು ಮುಂಜಾನೆ 1 ಗಂಟೆ ವೇಳೆ ಈ ಘಟನೆ ನಡೆದಿದೆ. ಮನೆಯಿಂದ ಬೊಬ್ಬೆ ಕೇಳಿ ಸ್ಥಳೀಯರು ಅಲ್ಲಿಗೆ ತಲುಪಿದಾಗ ಕೃಸ್ಟಿ ಜೇಕಬ್ ಇರಿತಕ್ಕೀಡಾಗಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.  ಕುಟುಂಬ ಕಲಹವೇ ಕೊಲೆ ಕೃತ್ಯಕ್ಕೆ ಕಾರಣವೆಂದು ಪೊಲೀಸರು ತಿಳಿಸುತ್ತಿದ್ದಾರೆ. ಮದ ದಮಲಿನಲ್ಲಿ  ತಂದೆ-ಮಗನ ಮಧ್ಯೆ ನಿನ್ನೆ ರಾತ್ರಿ ಜಗಳ ನಡೆದಿತ್ತೆನ್ನಲಾಗಿದೆ.  ಅನಂತರ ನಿದ್ರಿಸುತ್ತಿದ್ದ ವೇಳೆ ಪುತ್ರನ ಮೇಲೆ ತಂದೆ  ಆಕ್ರಮಣ ನಡೆಸಿ ಕೊಲೆಗೈದಿದ್ದಾನೆ.   ಆರೋಪಿಯನ್ನು ಘಟನೆ ನಡೆದ ತಕ್ಷಣ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

RELATED NEWS

You cannot copy contents of this page