ನಿಧನ
ಬಂಬ್ರಾಣ: ಬೀರಂಟಿಕೆರೆ ನಿವಾಸಿ ಬಾಬು ಕೆ.ಕೆ. (77) ಅಸೌಖ್ಯ ನಿಮಿತ್ತ ನಿಧನ ಹೊಂದಿದರು. ಮೊಗೇರ ದೈವಗಳ ಪಾತ್ರಿಯೂ, ಶ್ರೀರಾಮಾಂ ಜನೇಯ ಭಜನಾ ಮಂದಿರದ ಮಾಜಿ ಅಧ್ಯಕ್ಷರು ಹಾಗೂ ಕೃಷಿಕರೂ ಆಗಿದ್ದರು.
ಮೃತರು ಪತ್ನಿ ಸುಂದರಿ, ಮಕ್ಕಳಾದ ಪ್ರಭಾಕರ, ಯಮುನ, ಉಮಾವತಿ, ಸೊಸೆ ವನಿತ, ಸಹೋದರಿಯರಾದ ಲಕ್ಷ್ಮಿ, ದೇವಕಿ, ಕಮಲ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇವರ ಇನ್ನೋರ್ವೆ ಸಹೋದರಿ ಭಾಗಿ ಈ ಹಿಂದೆ ನಿಧನರಾಗಿದ್ದಾರೆ.