ನಿಲ್ಲಿಸಿದ್ದ ಕಾರಿನಿಂದ 40.25 ಲಕ್ಷರೂ. ಕಳವು

ಕಲ್ಲಿಕೋಟೆ: ರಸ್ತೆ ಬದಿ ನಿಲ್ಲಿಸಿದ್ದ ಕಾರಿನೊಳಗೆ ಗೋಣಿ ಚೀಲದಲ್ಲಿ ಕಟ್ಟಿ ಇರಿಸಿದ್ದ 40.25 ಲಕ್ಷರೂ. ವನ್ನು ಕಳವುಗೈದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.

ಕಲ್ಲಿಕೋಟೆ ಪೂವಾಟ್ಟುಪರಂಬು ಕೇರ್ ಲ್ಯಾಂಡ್ ಆಸ್ಪತ್ರೆ ಬಳಿ ನಿಲ್ಲಿಸಿದ್ದ ಅನಕುಳ ನಿವಾಸಿ ರಹೀಸ್ ಎಂಬವರ ಹಣವನ್ನು ಕಾರಿನ ಗಾಜು ಪುಡಿಗೈದು  ಕಳ್ಳರು ದೋಚಿದ್ದಾರೆ. ಮಾರ್ಚ್ ೧೯ರಂದು  ಅಪರಾಹ್ನ   ಈ ಕಳವು ನಡೆದಿದೆ. ಕಾರಿನ ಎದುರುಗಡೆಯ ಗಾಜನ್ನು ಹೊಡೆದು ಪುಡಿಗೈದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ರಹೀಸ್ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿ  ಆ ಪರಿಸರದ ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಹಣ ಒಳಗೊಂಡ ಗೋಣಿ ಚೀಲದೊಂದಿಗೆ ಇಬ್ಬರು ಹೋಗುತ್ತಿರುವ ದೃಶ್ಯ ಪತ್ತೆಯಾ ಗಿದೆ. ಅದರ ಜಾಡು ಹಿಡಿದು ಪೊಲೀ ಸರು ಮುಂದಿನ ತನಿಖೆ ಆರಂಭಿಸಿದ್ದಾರೆ.

 ಇದೇ ಸಂದರ್ಭದಲ್ಲಿ ಇಷ್ಟೊಂದು ಹಣ ದೂರುಗಾರನಿಗೆ ಎಲ್ಲಿಂದ ಲಭಿಸಿತ್ತು, ಅದರ ಮೂಲದ  ಬಗ್ಗೆ ಪೊಲೀಸರು ಇನ್ನೊಂದೆಡೆ ಶಂಕೆ ವ್ಯಕ್ತಪಡಿಸಿದ್ದಾರೆ.ಆ ಬಗ್ಗೆಯೂ ಅವರು ತನಿಖೆ ಆರಂಭಿಸಿದ್ದಾರೆ.

You cannot copy contents of this page