ನಿವೃತ್ತ ಪೋಸ್ಟ್ ಮಾಸ್ಟರ್ ಮಹಾಲಿಂಗ ನಾಯ್ಕ್ ನಿಧನ
ಪೆರ್ಲ: ಸ್ವರ್ಗ ಮೊಳಕ್ಕಾಲು ನಿವಾಸಿ, ನಿವೃತ್ತ ಪೋಸ್ಟ್ ಮಾಸ್ಟರ್ ಕೃಷಿಕ ಮಹಾಲಿಂಗ ನಾಯ್ಕ ಎಂ (೭೫) ನಿನ್ನೆ ಸ್ವ-ಗೃಹದಲ್ಲಿ ನಿಧನರಾದರು. ಕರ್ನಾಟಕದ ವಿಟ್ಲ, ಪಾಣಾಜೆ, ಪುತ್ತೂರಿನಲ್ಲಿ ಪೋಸ್ಟ್ ಮಾಸ್ಟರ್ ಆಗಿ ಸೇವೆ ಸಲ್ಲಿಸಿದ ಇವರು ಧರ್ಮಸ್ಥಳ ಅಂಚೆ ಕಚೇರಿಯ ಸೇವೆಯ ಬಳಿಕ ನಿವೃತ್ತರಾಗಿದ್ದರು.
ಮೃತರು ಪತ್ನಿ ಚಂದ್ರಾವತಿ, ಪುತ್ರಿಯರಾದ ಪ್ರೇಮ, ಜ್ಯೋತಿ, ಸ್ವಾತಿ, ಅಳಿಯಂದಿರಾದ ಪದ್ಮನಾಭ, ವಾಸುದೇವ, ಮೊಮ್ಮಕ್ಕಳಾದ ಧೃತಿ, ನಿಹಾಲ್, ಸಹೋದರ ಚನಿಯಪ್ಪ ನಾಯ್ಕ (ಕಾಸರಗೋಡು ನಿವೃತ್ತ ತಹಶೀಲ್ದಾರ್) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವ ಸಹೋದರ ಈಶ್ವರ ನಾಯ್ಕ ಮತ್ತು ಸಹೋದರಿ ಲಕ್ಷ್ಮಿ ಈ ಹಿಂದೆ ನಿಧನರಾಗಿದ್ದಾರೆ. ಮಹಾಲಿಂಗ ನಾಯ್ಕ ಅವರ ನಿಧನಕ್ಕೆ ಎಣ್ಮಕಜೆ ಪಂ. ಅಧ್ಯಕ್ಷ ಸೋಮಶೇಖರ್ ಜೆ.ಎಸ್, ವಾರ್ಡ್ ಸದಸ್ಯ ರಾಮಚಂದ್ರ ಎಂ, ಪಾಣಾಜೆ, ಆರ್ಲಪದವು ಅಂಚೆ ಕಚೇರಿಯ ಅಂಚೆ ಪಾಲಕರು, ಸಿಬ್ಬಂದಿಗಳು ಸಂತಾಪ ಸೂಚಿಸಿದ್ದಾರೆ.