ಕಾಸರಗೋಡು: ನೆಲ್ಲಿಕುಂಜೆ ಗರ್ಲ್ಸ್ ಹೈಸ್ಕೂಲ್ ಬಳಿಯ ನಿವಾಸಿ ದಿ| ಮಾಧನ ಎನ್.ಎ ಎಂಬವರ ಪತ್ನಿ ನಿವೃತ್ತ ಬ್ಯಾಂಕ್ ಉದ್ಯೋಗಿ ನಳಿನಿ (64) ನಿನ್ನೆ ರಾತ್ರಿ ನಿಧನ ಹೊಂದಿದರು. ಇವರು ಉತ್ತರ ಕೇರಳ, ದ.ಕ. ಜಿಲ್ಲೆಯಾದ್ಯಂತ ಗಾಯಕಿಯಾಗಿ ರಸಮಂಜರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಖ್ಯಾತರಾಗಿದ್ದರು. ಕಾಸರಗೋಡಿನ ರೆಡ್ ರೋಸ್ ಆರ್ಕೆಸ್ಟ್ರಾ ತಂಡ, ತುಳು ಚಲನಚಿತ್ರ ರಂಗದ ಸಂಗೀತ ನಿರ್ದೇಶಕ ಎ.ಕೆ. ವಿಜಯ್ (ಕೋಕಿಲಾ) ಅವರ ತಂಡದಲ್ಲೂ ಗಾಯಕಿಯಾಗಿದ್ದರು.
ನೆಲ್ಲಿಕುಂಜೆ ಶ್ರೀ ಕೋಮರಾಡಿ ದೈವಸ್ಥಾನ ಸಮಿತಿ ಸದಸ್ಯೆಯೂ ಆಗಿದ್ದರು. ಮೃತರು ಮಕ್ಕಳಾದ ಸುನಿತ, ನಮಿತಾ, ರಶ್ಮಿ, ದೀಪ್ತಿ, ಭಾಗ್ಯಶ್ರೀ, ಅಳಿಯಂದಿರಾದ ನವೀನ್ ಕೊಂಚಾಡಿ, ಶೈಲೇಶ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ನಿಧನಕ್ಕೆ ನೆಲ್ಲಿಕುಂಜೆ ಶ್ರೀ ಕೋಮರಾಡಿ ದೈವಸ್ಥಾನ ಸಮಿತಿ, ಮಧೂರು ಕ್ಷೇತ್ರ ಬ್ರಹ್ಮಕಲಶೋತ್ಸವ ಸಮಸ್ತ ಮೊಗೇರ ಹೊರೆಕಾಣಿಕೆ ಸಮಿತಿ ಸಂತಾಪ ಸೂಚಿಸಿದೆ.