ನೆಕ್ರಾಜೆ ಶ್ರೀ ಗೋಪಾಲಕೃಷ್ಣ ಕ್ಷೇತ್ರದಲ್ಲಿ ಶ್ರೀಕೃಷ್ಣಾಷ್ಟಮಿ ಶೋಭಾಯಾತ್ರೆ
ನೆಕ್ರಾಜೆ: ಇಲ್ಲಿನ ಶ್ರೀ ಸಂತಾನ ಗೋಪಾಲಕೃಷ್ಣ ಕ್ಷೇತ್ರ ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು. ಇದರಂಗವಾಗಿ ರಾಧಾ-ಕೃಷ್ಣರ ಶೋಭಾಯಾತ್ರೆ, ಮುದ್ದುಕೃಷ್ಣ ವೇಷ ಸ್ಪರ್ಧೆ, ಪುಟಾಣಿ ಕೃಷ್ಣ ವೇಷಸ್ಪರ್ಧೆ, ರಾಧಾಕೃಷ್ಣರಿಂದ ನೃತ್ಯ ಹಾಗೂ ವಿವಿಧ ಸ್ಪರ್ಧೆಗಳು ಜರಗಿತು. ಜೊತೆಗೆ ಭಜನೆ, ಭಕ್ತಿರಸಮಂಜರಿ, ವಿವಿಧ ಆಟೋಟ ಸ್ಪರ್ಧೆಗಳು ಜರಗಿತು. ರಾತ್ರಿ ವಿಶೇಷ ದೀಪಾಲಂಕೃತ ಕಾರ್ತಿಕಪೂಜೆ, ಅಷ್ಟಮಿಪೂಜೆ ಜರಗಿತು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಸ್ಥಳೀಯ ಪ್ರತಿಭೆಗಳಿಂದ ನೃತ್ಯವೈವಿಧ್ಯ, ಅನ್ನ ಸಂತರ್ಪಣೆ ಜರಗಿತು.