ನೆರೆಮನೆಯವರಿಗೆ ಬೆದರಿಕೆ: ತಡೆಯಲು ಬಂದ ಪೊಲೀಸ್ ಸೇರಿದಂತೆ ಇಬ್ಬರಿಗೆ ಇರಿತ

ಕಾಸರಗೋಡು: ನೆರೆಮನೆ ಯವರಿಗೆ ಬೆದರಿಕೆಯೊಡ್ಡುತ್ತಿದ್ದ ವೇಳೆ ಅದನ್ನು ತಡೆಯಲು ಬಂದ ಪೊಲೀಸ್ ಸಹಿತ ಇಬ್ಬರನ್ನು ಸಹೋದರರು ಸೇರಿ ಕತ್ತಿಯಿಂದ ಕಡಿದು ಗಾಯಗೊಳಿಸಿ   ಅಲ್ಲಿಂದ ಪರಾರಿಯಾದ ಘಟನೆ ನಡೆದಿದೆ.

ಬೇಡಡ್ಕ ಕಾಂಞಿರತ್ತಿಂಗಾಲ್ ಕೊರತ್ತಿಕುಂಡಿನಲ್ಲಿ ಮೊನ್ನೆ ರಾತ್ರಿ ಈ ಘಟನೆ ನಡೆದಿದೆ. ಕೊರತ್ತಿಕುಂಡು ನಿವಾಸಿಗಳು ಹಾಗೂ  ಸಹೋದರರಾದ ವಿಷ್ಣು (25) ಮತ್ತು ಜಿಷ್ಣು (ಜಿತ್ತು 24)  ಎಂಬವರು ಈ ಭೀಕರ ವಾತಾವರಣ ಸೃಷ್ಟಿಸಿರುವುದಾಗಿ ಆರೋಪಿಸಲಾಗಿದೆ.

ಇವರಿಬ್ಬರು ಮೊನ್ನೆ ರಾತ್ರಿ ನೆರೆಮನೆಯವರಿಗೆ ಬೆದರಿಕೆಯೊಡ್ಡ ತೊಡಗಿದರೆಂದೂ ಅದನ್ನು ತಿಳಿದು ತಡೆಯಲು ಬಂದ ಬೀಂಬುಗಾಲ್ ನಿವಾಸಿ ಸರೀಶ್ (35), ಬೇಡಗಂ ಪೊಲೀಸ್ ಠಾಣೆಯ ಸಿವಿಲ್ ಪೊಲೀಸ್ ಆಫೀಸರ್ ವಿ. ಸೂರಜ್ (36) ಕತ್ತಿಯಿಂದ ಕಡಿದು ಗಾಯ ಗೊಳಿಸಿರುವುದಾಗಿ ಆರೋಪಿಸಲಾಗಿದೆ. ಗಾಯಗೊಂಡ ಸರೀಶ್‌ರನ್ನು ಕಾಸರಗೋಡಿನ ಹಾಗೂ ಸೂರಜ್‌ರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.  ನೆರೆಮನೆ ನಿವಾಸಿಗಳಾದ  ಲೈನ್‌ಮ್ಯಾನ್ ಎಂ.ಎಂ. ರಫೀಕ್ ಮತ್ತು ಅವರ ಪತ್ನಿ ಅಧ್ಯಾಪಿಕೆ ವಿ.ಐ. ಫೆಮಿನರ ಮನೆ ಅಂಗಳಕ್ಕೆ ಮದ್ಯದಮಲಿನಲ್ಲಿ  ವಿಷ್ಣು ಮತ್ತು ಜಿಷ್ಣು ಪ್ರವೇಶಿಸಿ ಬೆದರಿಕೆಯೊಡ್ಡಿದ್ದರೆಂದೂ ಆಗ ನೆರೆಮನೆಯವರು ಅಲ್ಲಿಗೆ ಆಗಮಿಸಿ ಬೇಡಡ್ಕ ಪೊಲೀಸರಿಗೆ ಮಾಹಿತಿ ನೀಡಿದರು. ಅದರಂತೆ ಪೊಲೀಸರು ಮತ್ತು ಸರೀಶ್ ಸೇರಿ ಸಹೋದರರನ್ನು ತಡೆಯಲೆತ್ನಿಸಿದಾಗ  ಅವರು ಕತ್ತಿಯಿಂ ದ ಸರೀಶ್ ಮತ್ತು ಸೂರಜ್‌ರಿಗೆ ಕಡಿದು ಬಳಿಕ ಅಲ್ಲಿಂದ ಪರಾರಿಯಾದರೆಂದು ಪೊಲೀಸರು ತಿಳಿಸಿದ್ದಾರೆ. ಬೇಡಗಂ ಪೊಲೀಸರು ಪ್ರಕರಣ ದಾಖಲಿಸಿ ಇಬ್ಬರು ಆರೋಪಿಗಳ ಪತ್ತೆಗಾಗಿ ಶೋಧ ಆರಂಭಿಸಿದ್ದಾರೆ.  ಮೂಲತಃ ಕೋಟ್ಟಯಂ ನಿವಾಸಿಗಳಾದ ಈ ಇಬ್ಬರು ಆರೋಪಿಗಳು ನಾಲ್ಕು ವರ್ಷಗಳ  ಹಿಂದೆಯಷ್ಟೇ ಕಾಂಞಿರತ್ತುಂಗಾಲ್‌ಗೆ ಬಂದು  ರಬ್ಬರ್ ಟಾಪಿಂಗ್ ಮತ್ತು ಚಾಲಕರಾಗಿ ದುಡಿಯು ತ್ತಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page