ನ್ಯಾಯಾಲಯ ಖುಲಾಸೆಗೊಳಿಸಿದ ಯುವಕನ ವಿರುದ್ಧ ಬೆದರಿಕೆ: ಇಬ್ಬರ ವಿರುದ್ಧ ಕೇಸು: ಓರ್ವ ಕಸ್ಟಡಿಯಲ್ಲಿ

ಕುಂಬಳೆ: ಪ್ರಕರಣ ವೊಂ ದರಲ್ಲಿ ನ್ಯಾಯಾಲಯ ಖುಲಾಸೆ ಗೊಳಿಸಿದ   ಯುವಕನಿಗೆ ಬೆದರಿಕೆ ಸಂದೇಶ ಕಳುಹಿಸಿದ ಆರೋಪದಂತೆ ಇಬ್ಬರ ವಿರುದ್ದ ಕುಂಬಳೆ ಪೊಲೀಸರು  ಕೇಸು ದಾಖಲಿ ಸಿಕೊಂಡಿದ್ದಾರೆ.

ಹಕೀಂ, ಇಮ್ತಿಯಾಸ್ ಎಂಬಿ ವರ ವಿರುದ್ಧ ಕೇಸು ದಾಖಲಿಸಲಾಗಿದೆ. ಈಪೈಕಿ ಇಮ್ತಿಯಾಸ್ ಪೊಲೀಸ್ ಕಸ್ಟಡಿಯಲ್ಲಿದ್ದಾನೆ.  ಎಡನಾಡು ಕಟ್ಟತ್ತಡ್ಕ ಮಣಪ್ಪುರತ್ ಹೌಸ್‌ನ ವಿ.ಎಂ. ಅರುಣ್ ಕುಮಾರ್ ನೀಡಿದ ದೂರಿನಂತೆ ಈ ಇಬ್ಬರ ವಿರುದ್ಧ ಕೇಸು ದಾಖಲಿಸಲಾಗಿದೆ.  ಅರುಣ್ ಕುಮಾರ್‌ರನ್ನು ಈ ಹಿಂದೆ ದಾಖಲಿಸಿಕೊಂಡ ಪ್ರಕರಣದಲ್ಲಿ ನ್ಯಾಯಾಲಯ ಖುಲಾಸೆ ಗೊಳಿಸಿತ್ತೆಂದೂ, ಈ ದ್ವೇಷದಿಂದ ಬೆದರಿಕೆಯೊಡ್ಡಿ ಸಂದೇಶ ಕಳುಹಿಸಿರುವುದಾಗಿ ಕುಂಬಳೆ ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ.

‘ಪೊಲಿಟಿಕ್ಸ್ ಓನ್ಲಿ’ ಎಂಬ ವಾಟ್ಸಪ್ ಗ್ರೂಪ್‌ನಲ್ಲಿ ಬೆದರಿಕೆ ಸಂದೇಶ ರವಾನಿಸಲಾಗಿದೆ. ಗ್ರೂಪ್‌ನಲ್ಲಿ ದೂರುಗಾರನ ಮನೆಗಿರುವ ದಾರಿಯನನ್ನೂ ತಿಳಿಸಲಾಗಿತ್ತು.  ‘ಸಮಯ, ಸಂದರ್ಭ, ಪರಿಸ್ಥಿತಿ ಸೂಕ್ತವಾದ ಸಮಯದಲ್ಲಿ ಆ ಕಡತ ಮತ್ತೊಮ್ಮೆ ಪರಿಶೀಲಿಸಲಾ ಗುವುದು’ ಎಂಬುವುದಾಗಿ ವಾಟ್ಸಪ್ ಗ್ರೂಪ್‌ನಲ್ಲಿ ಪ್ರಚಾರ ಮಾಡಿರುವುದಾಗಿ ಪ್ರಕರಣದಲ್ಲಿ ತಿಳಿಸಲಾಗಿದೆ. ಕಸ್ಟಡಿಯಲ್ಲಿರುವ ಇಮ್ತಿಯಾಸ್‌ನನ್ನು ಸಮಗ್ರ ತನಿಖೆ ನಡೆಸಲಾಗುತ್ತಿದೆ.

RELATED NEWS

You cannot copy contents of this page