ಪಂಪಾದಲ್ಲಿ ದೈನಂದಿನ ೨೪ ತಾಸುಗಳ ತನಕ ಇರುಮುಡಿ ಕಟ್ಟು ಸೌಕರ್ಯ

ಶಬರಿಮಲೆ: ಶಬರಿಮಲೆ ತೀರ್ಥಾಟನೆಗೆ ಹೋಗುವ ಭಕ್ತರಿಗೆ ಅಗತ್ಯದ ‘ಇರುಮುಡಿ ಕಟ್ಟು’ ಲಭಿಸುವಂತೆ ಮಾಡುವ ಸೌಕರ್ಯ ವನ್ನು ಪಂಪಾದಲ್ಲಿ ಮುಜರಾಯಿ (ದೇವಸ್ವಂ) ಮಂಡಳಿ ಏರ್ಪಡಿಸಿದೆ.

ಇದಕ್ಕೆ ದೇವಸ್ವಂ ಮಂಡಳಿಯ ಕೌಂಟರ್‌ನಲ್ಲಿ ೩೦೦ ರೂ. ಪಾವತಿಸಬೇಕು. ಇರುಮುಡಿ ತುಪ್ಪ ತುಂಬಿಸಿದ ತೆಂಗಿನಕಾಯಿ ತುಪ್ಪ, ಅಕ್ಕಿ ಮತ್ತಿತರ ಅಗತ್ಯದ ಹರಕೆ ಸಾಮಗ್ರಿಗಳು ಇರುಮುಡಿ ಕಟ್ಟದಲ್ಲಿ ಒಳಗೊಳ್ಳಲಿದೆ. ಆದರೆ ಇರುಮುಡಿ ಯನ್ನು ತಲೆಮೇಲೆ ಕಟ್ಟಲು ಅಗತ್ಯದ ಬಟ್ಟೆಯನ್ನು ಭಕ್ತರೇ ಹೊಂದಿರಬೇಕು.

ಇರುಮುಡಿ ತುಂಬಿಸಲು ಪಂಪಾದಲ್ಲಿ ಮೂವರು ಅರ್ಚಕರನ್ನು ನೇಮಿಸಲಾಗಿದೆ. ಇರುಮುಡಿ ಯೊಂ ದಿಗೆ ಬರಲು ಸಾಧ್ಯವಾಗದ ಭಕ್ತರಿಗೆ ಅದು ಈ ಕೇಂದ್ರದಿಂದ ಲಭಿಸಲಿದೆ.

You cannot copy contents of this page