ಪತಿಯ ಅಗಲುವಿಕೆಯಿಂದ ಮನನೊಂದು ದೇಹಕ್ಕೆ ಕಿಚ್ಚಿರಿಸಿದ್ದ ಗೃಹಿಣಿ ಮೃತ್ಯು

ಕಾಸರಗೋಡು:  ಪತಿಯ ನಿಧನದಿಂದ  ಮನನೊಂದು ದೇಹಕ್ಕೆ ಕಿಚ್ಚಿರಿಸಿ  ಗಂಭೀರ ಸುಟ್ಟು ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಮಹಿಳೆ ಮೃತಪಟ್ಟರು.

ವಿದ್ಯಾನಗರ ನೆಲ್ಕಳ ಕಾಲನಿಯ ದಿ|  ರಾಘವ-ಲಕ್ಷ್ಮಿ ದಂಪತಿಯ ಪುತ್ರಿ  ಪ್ರಫುಲ್ (55)  ಮೃತಪಟ್ಟ ಮಹಿಳೆ.  ಇವರ ಪತಿ ನರಸಿಂಹ ಆರು ತಿಂಗಳ ಹಿಂದೆ ಮೃತಪಟ್ಟಿದ್ದರು. ಅನಂತರ ಮಾನಸಿಕವಾಗಿ ನೊಂದುಕೊಂಡಿದ್ದ ಪ್ರಫುಲ್ ಸೆಪ್ಟಂಬರ್ ೧೬ರಂದು  ದೇಹಕ್ಕೆ ಕಿಚ್ಚಿರಿಸಿ ಆತ್ಮಹತ್ಯೆಗೆ ಪ್ರಯತ್ನಿಸಿ ದ್ದರು.   ಸುಟ್ಟು ಗಾಯಗೊಂಡ ಪ್ರಫುಲ್‌ರನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾ ಗಿತ್ತು. ಆದರೆ ಸ್ಥಿತಿ ಗಂಭೀರ ವಾದುದರಿಂದ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

 ಮೃತರು ಸಹೋದರ-ಸಹೋದರಿಯರಾದ  ಶಶಿ, ಸತೀಶನ್, ಶೈಲ, ಶಾಂತ ಕುಮಾರ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page