ಪತಿಯ ನಿಧನದ ಬೆನ್ನಲ್ಲೇ ಪತ್ನಿಯೂ ನಿಧನ
ಕಾಸರಗೋಡು: ಆಲಂಪಾಡಿಯಲ್ಲಿ ಪತಿ ನಿಧನ ಹೊಂದಿದ ಬೆನ್ನಲ್ಲೇ ಪತ್ನಿಯೂ ನಿಧನರಾದರು. ಸಣ್ಣ ಆಲಂಪಾಡಿಯ ನಿವಾಸಿ ಸಿ. ಅಬ್ದುಲ್ ಖಾದರ್ ಹಾಜಿ (98), ಪತ್ನಿ ಆಯಿಷಾ (92) ಎಂಬಿವರು ನಿಧನರಾಗಿದ್ದಾರೆ. ಗುರುವಾರ ರಾತ್ರಿ ಅಬ್ದುಲ್ ಖಾದರ್ ಹಾಜಿ ನಿಧನ ಹೊಂದಿದರೆ, ನಿನ್ನೆ ಬೆಳಿಗ್ಗೆ ಅವರ ಪತ್ನಿ ಆಯಿಷಾ ನಿಧನರಾಗಿದ್ದಾರೆ. ಬಳಿಕ ಇವರಿಬ್ಬರ ಮೃತದೇಹಗಳನ್ನು ಆಲಂಪಾಡಿ ಜುಮಾ ಮಸೀದಿ ಬಳಿ ಅಂತ್ಯ ಕ್ರಿಯೆ ನಡೆಸಲಾಯಿತು. ಮೃತರು ಮಕ್ಕಳಾದ ಸಿ.ಎಂ. ಮೊಹಮ್ಮದ್ ಹಾಜಿ, ಅಬ್ದುಲ್ ರಹಿಮಾನ್ ಹಾಜಿ, ಉಮ್ಮರ್ ಹಾಜಿ, ರುಖಿಯಾ ಬಿ.ವಿ. ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.