ಪತ್ನಿಯನ್ನು ಕೊಲೆಗೈದು ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಿದ ಪತಿ

ಹೈದರಾಬಾದ್: ಯುವಕ ನೋರ್ವ  ಪತ್ನಿಯನ್ನು ಕೊಲೆಗೈದು ತುಂಡುಗಳಾಗಿಸಿ ಪ್ರೆಶರ್ ಕುಕ್ಕರ್‌ನಲ್ಲಿ  ಬೇಯಿಸಿದ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಪತಿಯನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.  ಹೈದ ರಾಬಾ ದ್‌ನಲ್ಲಿ ಈ ಘಟನೆ ನಡೆದಿದೆ.  36ರ ಹರೆಯದ ವೆಂಕಟಮಾಧವಿ ಎಂಬಾಕೆ ಕೊಲೆಗೀಡಾದ ಯುವತಿ. ಈ ಸಂಬಂಧ ಈಕೆಯ ಪತಿಯಾದ ಹೈದರಾಬಾದ್ ನಿವಾಸಿ ಗುರುಮೂರ್ತಿ (45) ಎಂಬಾತನನ್ನು ಬಂಧಿಸಲಾಗಿದೆ. ಕೊಲೆಕೃತ್ಯ ಬೆಳಕಿಗೆ ಬರದಿರಲು ಮೃತದೇಹವನ್ನು ಆರೋಪಿ ತುಂಡುಗಳಾಗಿ ಬೇಯಿಸಿರುವುದಾಗಿ ಹೇಳಲಾಗುತ್ತಿದೆ.  ಜನವರಿ 16ರಿಂದ ವೆಂಕಟಮಾಧವಿ ನಾಪತ್ತೆಯಾಗಿ ರುವುದಾಗಿ ತಿಳಿಸಿ ಗುರುಮೂರ್ತಿ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ವೇಳೆ ಸಂಶಯಗೊಂಡ ಪೊಲೀಸರು ಗುರುಮೂರ್ತಿಯನ್ನು  ಕಸ್ಟಡಿಗೆ ತೆಗೆದು ಪರಿಶೀಲನೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ.   ಇದೇ ವೇಳೆ ಕೊಲೆಕೃತ್ಯಕ್ಕೆ ಕಾರಣವೇ ನೆಂದು ತಿಳಿಯಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

You cannot copy contents of this page