ಪರೀಕ್ಷೆಯಲ್ಲಿ ಅಂಕ ಕಡಿಮೆ: ಮನೆ ಬಿಟ್ಟ ವಿದ್ಯಾರ್ಥಿನಿ ಸಹಿತ ಇಬ್ಬರು ಬಾಲಕಿಯರು ರೈಲಿನಲ್ಲಿ ಪತ್ತೆ

ಕಾಸರಗೋಡು: ಪರೀಕ್ಷೆಯಲ್ಲಿ ನಿರೀಕ್ಷಿಸಿದ ಅಂಕ ಲಭಿಸದ ಬೇಸರದಿಂದ ವಿದ್ಯಾರ್ಥಿನಿ ತನ್ನ ಸಂಬಂಧಿಕಳಾದ ಬಾಲಕಿ ಜೊತೆ ಮನೆ ಬಿಟ್ಟು ಬಳಿಕ ಅವರಿಬ್ಬರನ್ನು ರೈಲಿನಿಂದ ಪೊಲೀಸರು ಪತ್ತೆಹಚ್ಚಿದ ಘಟನೆ ಇಂದು ಮುಂಜಾನೆ ನಡೆದಿದೆ.

ಕಣ್ಣೂರು ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ 18ರ ಹರೆಯದ ವಿದ್ಯಾರ್ಥಿನಿಗೆ ಪ್ಲಸ್‌ಟು ಪರೀಕ್ಷೆಯಲ್ಲಿ  ನಿರೀಕ್ಷಿಸಿದಷ್ಟು  ಅಂಕ ಲಭಿಸಿರಲಿಲ್ಲ. ಅದರಿಂದ ಬೇಸರಗೊಂಡ ಆಕೆ  ಸಂಬಂಧಿಕಳಾದ 14ರ ಹರೆಯದ ಬಾಲಕಿಯೊಂದಿಗೆ ನಿನ್ನೆ ಬೆಳಿಗ್ಗೆ ಮನೆ ಬಿಟ್ಟಿದ್ದಳು. ಆ ಬಗ್ಗೆ ನೀಡಲಾದ ದೂರಿ ನಂತೆ ಕಣ್ಣೂರು ಸಿಟಿ ಪೊಲೀಸರು ಮಿಸ್ಸಿಂಗ್ ಪ್ರಕರಣ ದಾಖಲಿಸಿ ಆ ಕುರಿತಾದ ಮಾಹಿತಿಯನ್ನು  ರೈಲ್ವೇ ಪೊಲೀಸ್ ಸೇರಿ ಇತರ ಎಲ್ಲಾ ಪೊಲೀಸ್ ಠಾಣೆಗಳಿಗೆ ನೀಡಿದ್ದರು.  ಇದರಂತೆ ಕಾಸರಗೋಡು ರೈಲ್ವೇ ಪೊಲೀಸರು ನಿನ್ನೆಯಿಂದ ರೈಲುಗಳಲ್ಲಿ ವ್ಯಾಪಕ ಶೋಧ ಆರಂಭಿಸಿದ್ದರು. ಇದರಂತೆ ಮಂಗಳೂರಿನಿಂದ ಕೊಯಂಬತ್ತೂರಿಗೆ ಬರುತ್ತಿದ್ದ ವೆಸ್ಟ್ ಕೋಸ್ಟ್ ಎಕ್ಸ್‌ಪ್ರೆಸ್ ರೈಲುಗಾಡಿ ಇಂದು ಮುಂಜಾನೆ ೧ ಗಂಟೆಗೆ ಕಾಸರಗೋಡು ರೈಲು ನಿಲ್ದಾಣಕ್ಕೆ ತಲುಪಿದಾಗ ಕಾಸರಗೋಡು ರೈಲ್ವೇ ಸಿವಿಲ್ ಪೊಲೀಸ್ ಆಫೀಸರ್ ಗಳಾದ ರಿನೀತ್ ಮತ್ತು  ಶಂಶೀರ್ ಸೇರಿ ರೈಲಿನಲ್ಲಿ ಶೋಧ ನಡೆಸಿದಾಗ ಅದರಲ್ಲಿ ನಾಪತ್ತೆಯಾದ  ಹೆಣ್ಣು ಮಕ್ಕಳಿಬ್ಬರನ್ನು ಪತ್ತೆ ಹಚ್ಚಿದ್ದಾರೆ. ನಂತರ ಅವರಿಬ್ಬ ರನ್ನು ಕಣ್ಣೂರು ಸಿಟಿ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಯಿತು.

RELATED NEWS

You cannot copy contents of this page