ಕುಂಬಳೆ: ರಾಷ್ಟ್ರೀಯ ಹೆದ್ದಾರಿ ಆರಿ ಕ್ಕಾಡಿ ಕಡವತ್ ಸಮೀಪ ನಿನ್ನೆ ರಾತ್ರಿ ಸಂಭವಿಸಿದ ವಾಹನ ಅಪಘಾ ತದಲ್ಲಿ ಯುವಕನೋರ್ವ ಮೃತಪಟ್ಟು ಇನ್ನೋ ರ್ವ ಗಾಯಗೊಂಡ ಘಟನೆ ನಡೆದಿದೆ.
ಬೈಕ್ ಹಾಗೂ ಮೀನು ಸಾಗಾಟ ದ ಪಿಕಪ್ ವಾಹನ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಕೊಡ್ಯಮ್ಮೆ ಚೇಪಿನಡ್ಕದ ದಿ| ಪೀವಿಂಗಿ ಮೊಹಮ್ಮದ್ ಎಂಬವರ ಪುತ್ರ ಅಬ್ದುಲ್ ರಹ್ಮಾನ್ ಅಸ್ಕರ್ (22) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇವರ ಜೊತೆಗೆ ಬೈಕ್ನಲ್ಲಿದ್ದ ಸ್ನೇಹಿತ ಚೇಪಿನಡ್ಕದ ಅನಸ್ (20) ಗಂಭೀರ ಗಾಯ ಗೊಂಡಿದ್ದು ಅವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ನಿನ್ನೆ ರಾತ್ರಿ 9.45ರ ವೇಳೆ ಆರಿಕ್ಕಾಡಿ ಕಡವತ್ ಮೊದಲ ಗೇಟ್ ಬಳಿ ಅಪಘಾತವುಂಟಾಗಿದೆ. ಅಬ್ದುಲ್ ರಹ್ಮಾನ್ ಅಸ್ಕರ್ ಹಾಗೂ ಅನಸ್ ಬೈಕ್ನಲ್ಲಿ ಕುಂಬಳೆಯಿಂದ ಕೊಡ್ಯಮ್ಮೆ ಚೇಪಿನಡ್ಕಕ್ಕೆ ತೆರಳುತ್ತಿದ್ದಾಗ ಮಂಗಳೂರಿನಿಂದ ಕಾಸರಗೋಡಿನತ್ತ ತೆರಳುತ್ತಿದ್ದ ಪಿಕಪ್ ಢಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಗಂಭೀರ ಗಾಯ ಗೊಂಡ ಈ ಇಬ್ಬರನ್ನು ಕೂಡಲೇ ಕುಂಬಳೆಯ ಆಸ್ಪತ್ರೆಗೆ ತಲುಪಿಸಿದ್ದು, ಅಷ್ಟರೊಳಗೆ ಅಬ್ದುಲ್ ರಹ್ಮಾನ್ ಅಸ್ಕರ್ ಮೃತಪಟ್ಟಿದ್ದಾರೆ. ಅನಸ್ರನ್ನು ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಮಂಗಳೂರಿನ ಆಸ್ಪತ್ರೆಗೆ ಕೊಂ ಡೊಯ್ದ್ದು ದಾಖಲಿಸಲಾಗಿದೆ. ಮೃತ ಅಬ್ದುಲ್ ರಹ್ಮಾನ್ ಅಸ್ಕರ್ ತಾಯಿ ಖದೀಜ, ಸಹೋ ದರ-ಸಹೋರಿಯರಾದ ಬಷೀರ್, ಇಬ್ರಾಹಿಂ, ಮೂಸ, ಸಿದ್ದಿಕ್, ಸೈನಬ, ಮೈಮೂನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ಮೃತದೇಹದ ಮರಣೋತ್ತರ ಪರೀಕ್ಷೆ ಇಂದು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ನಡೆಯಲಿದೆ. ಯುವಕನ ಅಕಾಲಿಕ ನಿಧನ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ.