ಪಿಕಪ್ ವಾಹನ ಕಳವು: ಇಬ್ಬರ ಸೆರೆ

ಕಾಸರಗೋಡು: ಪೆರಿಯಾ ಪೇ ಟೆಯ ಗೋದಾಮು ಬಳಿ ನಿಲ್ಲಿಸಿದ್ದ ಪಿಕಪ್ ವ್ಯಾನ್ ಕಳವುಗೈದ ಪ್ರಕರಣ ದಲ್ಲಿ ಇಬ್ಬರು ಆರೋಪಿಗಳನ್ನು ಬೇಕಲ ಪೊಲೀಸರು ಬಂಧಿಸಿದ್ದಾರೆ.

ಕುಣಿಯ ತೋಕಾನಂ ಮೊಟ್ಟದ ಮೊಹಮ್ಮದ್ ಸಾಜೀದ್ (27) ಮತ್ತು ಪೆರುಂಬಾ ತೊಂಡೋಳಿಯ ಜುನೈದ್ 28)  ಬಂಧಿತ ಆರೋಪಿಗಳು.

ಪೆರಿಯ ಪೇಟೆಯ ಕಲ್ಪಕ್ ಮಾರ್ಕೆಟಿಂಗ್ ಕಂಪೆನಿಯ ಮಾಲಕ ಅಬ್ದುಲ್ ಸತ್ತಾರ್ ಎಂಬವರ ಪಿಕಪ್   ಕಳವಿಗೀಡಾಗಿತ್ತು. ಅದರ ಚಾಲಕ ಕೀಲಿಕೈಯನ್ನು ವ್ಯಾನಿನಲ್ಲಿರಿಸಿ ಗೋ ದಾಮಿನೊಳಗೆ ಹೋಗಿದ್ದ ಸಂದರ್ಭ ದಲ್ಲಿ  ವಾಹನವನ್ನು ಕದ್ದೊಯ್ಯಲಾ ಗಿತ್ತು. ಆ ಬಗ್ಗೆ ಅಬ್ದುಲ್ ಸತ್ತಾರ್  ಪೊಲೀಸರಿಗೆ ದೂರು ನೀಡಿದ್ದರು.    ಇದೇ ವೇಳೆ ಕಳವಿಗೀಡಾದ ವಾಹನ ಮೊನ್ನೆ ಬೆಳಿಗ್ಗೆ ತೋಕಾನ ತೊಟ್ಟಿಯಿಲ್‌ನಲ್ಲಿ ಉಪೇಕ್ಷಿತ ಸ್ಥಿತಿಯಲ್ಲಿ  ಪೊಲೀಸರು ಪತ್ತೆಹಚ್ಚಿದ್ದಾರೆ. ಆ ಪರಿಸರದ ಸಿಸಿ ಟಿವಿ ದೃಶ್ಯ ಪರಿಶೀಲಿಸಿದಾಗ ಸ್ಕೂಟರ್‌ನಲ್ಲಿ ಬಂದ ಇಬ್ಬರು ವ್ಯಾನ್ ಅಪಹರಿಸುವ ದೃಶ ಪತ್ತೆಯಾಗಿತ್ತು. ಅದರ ಜಾಡು ಹಿಡಿದು ಪೊಲೀಸರು ನಡೆಸಿದ ಶೋಧದಲ್ಲಿ ಆರೋಪಿಗ ಳನ್ನು ಬಂಧಿಸಲು ಸಾಧ್ಯವಾಗಿದೆ.

You cannot copy contents of this page