ಪಿಣರಾಯಿ ಪೊಲೀಸ್- ಆರ್ಎಸ್ಎಸ್ ಮೈತ್ರಿ ಆರೋಪ: ಎಸ್ಡಿಪಿಐ ವಾಹನ ಜಾಥಾ ಇಂದಿನಿಂದ
ಕುಂಬಳೆ: ರಾಜ್ಯದ ಪಿಣರಾಯಿ ವಿಜ ಯನ್ ಪೊಲೀಸ್- ಆರ್ಎಸ್ಎಸ್ ಮೈತ್ರಿ ಕೇರಳವನ್ನು ಹಾನಿಗೊಳಿಸುತ್ತಿದೆ ಎಂಬ ಆರೋಪದೊಂದಿಗೆ ನಡೆಸುವ ಎಸ್ಡಿಪಿಐ ಕಾರ್ಯಾಗಾರ ದಂಗವಾಗಿ ಮಂಜೇಶ್ವರ ಮಂಡಲ ಅಧ್ಯಕ್ಷ ಅಶ್ರಫ್ ಬಡಾಜೆ ನೇತೃತ್ವ ನೀಡುವ ವಾಹನ ಪ್ರಚಾರ ಜಾಥಾ ಇಂದಿನಿಂದ 19ರವರೆಗೆ ನಡೆಯಲಿದೆ ಎಂದು ಪದಾಧಿಕಾರಿಗಳು ಸುದ್ಧಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಚಿನ್ನ ಕಳ್ಳ ಸಾಗಾಟ, ಕೊಲೆ, ಮಾನಭಂಗ, ತೃಶೂರು ಪೂರಂ ಕಳಂಕಗೊಳಿಸಲು ಯತ್ನ, ಮರ ಕಡಿದು ಸಾಗಾಟ ಮೊದಲಾದ ರೀತಿಯ ಅಕ್ರಮ ಚಟುವಟಿಕೆಗಳು ಉನ್ನತ ಪೊಲೀಸ್ ನೇತೃತ್ವದಲ್ಲಿ ನಡೆಸಲಾಗುತ್ತಿದೆ ಎಂದು ಆಡಳಿತ ಪಕ್ಷದ ಶಾಸಕರಾಗಿ ದ್ದವರೇ ಬಹಿರಂಗಪಡಿಸಿದ್ದು, ಮುಖ್ಯಮಂತ್ರಿ ಯಾವುದೇ ಕ್ರಮ ಕೈಗೊಳ್ಳಲು ಸಿದ್ಧವಾಗುತ್ತಿಲ್ಲವೆಂದು ಎಸ್ಡಿಪಿಐ ಪದಾಧಿಕಾರಿಗಳು ಆರೋಪಿಸಿದರು.
ರಾಜ್ಯದ ಉನ್ನತ ಪೊಲೀಸ್ ಅಧಿ ಕಾರಿ ಎಂ.ಆರ್. ಅಜಿತ್ ಕುಮಾರ್ ರಹ ಸ್ಯವಾಗಿ ಆರ್ಎಸ್ಎಸ್ನವ ರೊಂದಿಗೆ ಚರ್ಚಿಸಿರುವುದು ನೀತಿರಹಿತ ಹಾಗೂ ಅಲ್ಪಸಂಖ್ಯಾತರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಿ ದೌರ್ಜನ್ಯಗೈಯ್ಯಲಿರುವ ಯತ್ನವೆಂದು ಅವರು ಆರೋಪಿಸಿದರು.
ಇಂದು ಸಂಜೆ 4 ಗಂಟೆಗೆ ಮೊಗ್ರಾಲ್ನಲ್ಲಿ ಜಿಲ್ಲಾ ಕಾರ್ಯದರ್ಶಿ ಸಿ.ಎ. ಸವಾದ್ ಜಾಥಾ ಉದ್ಘಾಟಿಸು ವರು. 19ರಂದು ಸಂಜೆ 7 ಗಂಟೆಗೆ ಹೊಸಂಗಡಿಯಲ್ಲಿ ಸಮಾಪ್ತಿಗೊಳ್ಳಲಿದೆ. ಸುದ್ಧಿಗೋಷ್ಠಿಯಲ್ಲಿ ಮಂಡಲ ಉಪಾಧ್ಯಕ್ಷ ಅನ್ವರ್ ಆರಿಕ್ಕಾಡಿ ಶರೀಫ್ ಪಾವೂರು, ಕಾರ್ಯದರ್ಶಿ ಶಬೀರ್ ಪೊಸೋಟೊ, ಜೊತೆ ಕಾರ್ಯದರ್ಶಿ ಸುಬೈರ್ ಹಾರೀಸ್, ಮಂಡಲ ಸಮಿತಿ ಸದಸ್ಯ ತಾಜುದ್ದೀನ್ ಉಪ್ಪಳ ಭಾಗವಹಿಸಿದರು.