ಪುತ್ತಿಗೆ: ಪುತ್ತಿಗೆ ಪಂಚಾಯತ್ನ ಮತದಾರ ಯಾದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಮುಸ್ಲಿಂ ಲೀಗ್ ಆರೋಪಿಸಿದೆ. 23-07-2025ರಂದು ಪ್ರಕಟಿಸಿದ ಕರಡು ಮತದಾರರ ಯಾದಿಯನ್ನು ಪರಿಶೀಲಿಸಿದಾಗ ಹಲವು ವಾರ್ಡ್ಗಳಲ್ಲಿ ಮತದಾರರ ಯಾದಿಯ ವಾರ್ಡ್ ವಿಭಜನೆ ಅಂತಿಮ ವಿಜ್ಞಾಪನೆಯಲ್ಲಿ ತಿಳಿಸಿದ ಮನೆ ನಂಬ್ರ ಗಡಿ ಪ್ರಕಾರ ಅಲ್ಲವೆಂದು ತಿಳಿದು ಬಂದಿದೆ. ಆದರೆ ಪ್ರಸ್ತುತ ವಾರ್ಡ್ಗಳಿಂದ ಹೊಸ ವಾರ್ಡ್ಗಳಿಗೆ, ಪೋಲಿಂಗ್ ಸ್ಟೇಷನ್ಗಳಿಗೆ ಕ್ರಮೀಕರಿಸಿದಾಗ ಡಿ ಲಿಮಿಟೇಶನ್ ಹೊರಡಿಸಿದ ಆದೇಶದ ಗಡಿಗಿಂತಲೂ ಹೊರಗಿರುವ ಮತದಾರರನ್ನು ಸೇರಿಸಲಾಗಿದೆ. 11ನೇ ವಾರ್ಡ್ ಅನಂತಪುರದಲ್ಲಿ ಗಡಿ ಪ್ರಕಾರ ಸೇರಬೇಕಾದ ಮತದಾರರು 9ನೇ ವಾರ್ಡ್ ಸೀತಾಂಗೋಳಿಗೂ, 12ನೇ ವಾರ್ಡ್ ಎಡನಾಡಿಗೆ ಸೇರಿಸ ಲಾಗಿದೆ. 9ನೇ ವಾರ್ಡ್ ಸೀತಾಂಗೋ ಳಿಗೆ ಸೇರಬೇಕಾದವರು 12ನೇ ವಾರ್ಡ್ ಎಡನಾಡಿಗೆ ಸೇರಿಸಲಾಗಿದೆ. 12ನೇ ವಾರ್ಡ್ನಲ್ಲಿ ಸೇರಬೇಕಾದವರು 11ನೇ ವಾರ್ಡ್ನಲ್ಲೂ, 13ನೇ ವಾರ್ಡ್ನಲ್ಲೂ ಸೇರಿಸಲಾಗಿದೆ. ಈ ಲೋಪದೋಷಗಳನ್ನು ಸರಿಪಡಿಸಬೇ ಕೆಂದು ಆಗ್ರಹಿಸಿ ಪುತ್ತಿಗೆ ಪಂಚಾಯತ್ ಮುಸ್ಲಿಂ ಲೀಗ್ ಪ್ರಧಾನ ಕಾರ್ಯದರ್ಶಿ ಇ.ಕೆ. ಮೊಹಮ್ಮದ್ ಕುಂuಟಿಜeಜಿiಟಿeಜ ರಾಜ್ಯ ಚುನಾವಣಾ ಆಯೋಗಕ್ಕೆ, ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.
